ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆ..!

Social Share

ಆನೇಕಲï,ಅ.25-ತಾಲೂಕಿನ ಹೆನ್ನಾಗರ ಗೇಟ್ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.ಮೃತಪಟ್ಟ ವ್ಯಕ್ತಿಯನ್ನು ಬೆಂಗಳೂರಿನ ವೀರಭದ್ರನಗರ ನಿವಾಸಿ ಚೇತನ್ ಕುಮಾರ್ (35)ಎಂದು ಗುರುತಿಸಲಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಕಾರು ಇಲ್ಲಿ ನಿಂತ್ತಿತ್ತು,ಡ್ರೈವರ್ ಸೀಟಿನಲ್ಲೇ ಕೊತು ರೀತಿಯಲ್ಲಿದ್ದ ಕಾರಣ ಮಲಗಿರಬಹುದೆಂದು ಸ್ಥಳೀಯರು ಊಹಿಸಿದ್ದರು.

ಬೆಳಿಗ್ಗೆ ವಾಸನೆ ಬರುತ್ತಿದಾಗ ಅನುಮಾನಗೊಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಡೋರ್ ತೆಗೆದ ಬಳಿಕ ಕೊಳೆತ ರೂಪದಲ್ಲಿ ಶವ ಪತ್ತೆಯಾಗಿದೆ.

ಕಾರಿನಿಂದ್ ಶವ ಹೊರ ತೆಗೆದ ಹೆಬ್ಬಗೋಡಿ ಪೊಲೀಸರು, ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ .ಚೇತನ್ ಕುಮಾರ್ ತಿರುಪತಿಗೆ ಹೋಗಿ ಬರುತ್ತೇನೆಂದು ಮನೆಯವರಿಗೆ ಹೇಳಿ ತೆರಳಿದ್ದರು. ಸಾವಿಗೆ ಕಾರಣ ಏನೆಂದು ಪೊಲೀಸರು ಪರಿಶೀಲಿಸುತ್ತಿದ್ದು, ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿದೆ.

Articles You Might Like

Share This Article