39 ವರ್ಷ ಬಾಹ್ಯಾಕಾಶ ಸಂಶೋಧನೆ ನಡೆಸಿ ಭೂಮಿಗೆ ಹಿಂತಿರುಗಿದ ಉಪಗ್ರಹ

Social Share

ವಾಷಿಂಗ್ಟನ್,ಜ.10- ಬಾಹ್ಯಾಕಾಶದಲ್ಲಿ 39 ವರ್ಷಗಳ ಕಾಲ ಕಾರ್ಯಚರಣೆ ನಡೆಸಿ ನಿಷ್ಕ್ರೀಯಗೊಂಡ ನಾಸಾ ಉಪಗ್ರಹ ಯಶಸ್ವಿಯಾಗಿ ಭೂಮಿಗೆ ಹಿಂತಿರುಗಿದೆ.

ನಾಸಾ 1984ರಲ್ಲಿ ಬಾಹ್ಯಾಕಾಶಕ್ಕೆ ಉಡಾಯಿಸಿದ್ದ 2420 ಕೆ.ಜಿ ತೂಕದ ಭೂಮಿಯ ವಿಕಿರಣ ಬಜೆಟ್ ಉಪಗ್ರಹ 39 ವರ್ಷಗಳ ಕಾರ್ಯಚರಣೆ ಮುಗಿಸಿ ನಿನ್ನೆ ಬೇರಿಂಗ್ ಸಮುದ್ರಕ್ಕೆ ವಾಪಸ್ಸಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ದೃಢಪಡಿಸಿದೆ.

21 ವರ್ಷಗಳ ಕಕ್ಷೆಯಲ್ಲಿದ್ದ ಈ ಉಪಗ್ರಹ ಭೂಮಿ ಸೂರ್ಯನಿಂದ ಶಕ್ತಿಯನ್ನು ಹೇಗೆ ಹೀರಿಕೊಳ್ಳುತ್ತದೆ ಮತ್ತು ಹೊರ ಸೂಸುತ್ತದೆ ಎನ್ನುವುದನ್ನು ಓಝೋನ್ ಪದರ, ನೀರಿನ ಆವಿ, ನೈಟ್ರೋಜನ್ ಡೈ ಆಕ್ಸೈಡ್ ಕುರಿತಂತೆ ನಮಗೆ ಬಹುಮುಖ್ಯ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಅಮೆರಿಕಾ ಹೇಳಿಕೊಂಡಿದೆ.

ಅಮೆರಿಕದಲ್ಲಿ ಜೂ.ಎನ್‌ಟಿಆರ್‌ಗೆ ಅದ್ಭುತ ಸ್ವಾಗತ

ಭೂಮಿಗೆ ವಾಪಸ್ಸಾಗಿರುವ ಉಪಗ್ರಹದ ಬಿಡಿ ಭಾಗಗಳು ಹಾಗೆ ಉಳಿದುಕೊಂಡಿವೆಯೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಯಾವುದೇ ಉಪಗ್ರಹಗಳು ಸಮುದ್ರಕ್ಕೆ ಬಿದ್ದ ತಕ್ಷಣ ಸುಟ್ಟು ಹೋಗುವುದು ಮಾಮೂಲಾಗಿರುತ್ತದೆ.

ಈ ಉಪಗ್ರಹ ನೀಡಿದ ಮಾಹಿತಿ ಮಾಂಟ್ರಿಯಲ್ ಪ್ರೋಟೋಕಾಲ್ ಒಪ್ಪಂದವನ್ನು ರೂಪಿಸಲು ಸಹಾಯ ಮಾಡಿತು, 1987 ರಲ್ಲಿ ಡಜನ್‍ಗಟ್ಟಲೆ ದೇಶಗಳು ಸಹಿ ಮಾಡಿದ ಅಂತರರಾಷ್ಟ್ರೀಯ ಒಪ್ಪಂದ ಇದಾಗಿತ್ತು. ಇದು ಓಝೋನ -ನಾಶಕ ಕ್ಲೋರೋಪ್ರೋರೋಕಾರ್ಬನ್‍ಗಳ ಬಳಕೆಯಲ್ಲಿ ಜಗತ್ತಿನಾದ್ಯಂತ ನಾಟಕೀಯ ಇಳಿಕೆಗೂ ಕಾರಣವಾಗಿತ್ತು ಎನ್ನುವುದನ್ನು ಯಾರು ಮರೆಯಬಾರದು.

Dead, NASA, satellite, returns, Earth, 38 years,

Articles You Might Like

Share This Article