ಮೃತರ ಹೆಸರಿನಲ್ಲಿ ಜಾಬ್ ಕಾರ್ಡ್ ಸೃಷ್ಠಸಿ ಲಕ್ಷಾಂತರ ರೂ. ವಂಚನೆ

Social Share

ನುಹ್ (ಹರಿಯಾಣ), ಆಗಸ್ಟ್- 3 – ರಾಜ್ಯದ ನುಹ್ ಜಿಲ್ಲೇಯಲ್ಲಿ ಮೃತರ ಹೆಸರನ್ನು ಸೇರಿಸಿ ಜಾಬ್ ಕಾರ್ಡ್‍ಗಳನ್ನು ಸೃಷ್ಠಸಿ
ಮನರೇಗಾ ಯೋಜನೆಯಡಿಯಲ್ಲಿ ಲಕ್ಷಾಂತರ ರೂ ದೂಚುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪಂಚಾಯತ್ ಮತ್ತು ನೀರಾವರಿ ಇಲಾಖೆಯ ನೌಕರರು ಮತ್ತು ಇಬ್ಬರು ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಒಂಬತ್ತು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಥಳೀಯ ಗ್ರಾಮಸ್ಥ ಸುಖ್ಬೀರ್ ಸಿಂಗ್ ಅವರು ಸರ್ಕಾರದ ಸಾರ್ವಜನಿಕ ಕುಂದುಕೊರತೆಗಳು ಮತ್ತು ಹರಿಯಾಣ ಸಿಎಂ ವಿಂಡೋ ಪೋರ್ಟರ್‍ಗೆ ದೂರು ಸಲ್ಲಿಸಿದ್ದರು, ಸುಮಾರು ಎರಡು-ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ ಜನರಿಗೆ ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಜಾಬ್ ಕಾರ್ಡ್ ಮಾಡಿಸಿ ಅಕ್ರಮವಾಗಿ ಬ್ಯಾಂಕ್ ಖಾತೆ ತೆರೆಯುವ ಮೂಲಕ ಭಾರಿ ಅವ್ಯವಹಾರ ನಡೆಯುತ್ತಿದೆ ಎಂದು ಎಳೆ ಎಳೆಯಾಗಿ ಅಕ್ರಮ ದಂಧೆ ವಿವರಿಸಿದ್ದರು. ಸುಖಬೀರ್ ಅವರ ದೂರಿನ ಮೇರೆಗೆ ಮುಖ್ಯಮಂತ್ರಿಗಳ ಫ್ಲೈಯಿಂಗ್ ಸ್ಕ್ವಾಡ್ ತಂಡ ರಚಿಸಿ ತನಿಖೆಯನ್ನು ಪ್ರಾರಂಭಿಸಿತು ಮತ್ತು ಬ್ಲಾಕ್ ಅಭಿವೃದ್ಧಿ ಮತ್ತು ಪಂಚಾಯತ್ ಕಚೇರಿ ಇಂದ್ರಿ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಸತ್ತ ಏಳು ಜನರ ಜಾಬ್ ಕಾರ್ಡ್‍ಗಳನ್ನು ತಯಾರಿಸಿದ್ದಾರೆ ಮತ್ತು ಈ ವ್ಯಕ್ತಿಗಳಿಗೆ ಇಂದ್ರಿ ಮತ್ತು ಖೇಡ್ಲಿ ಕಂಕನರ್‍ನಲ್ಲಿ ಕೆಲಸ ಮಾಡುವುದನ್ನು ತೋರಿಸಿದ್ದಾರೆ ಎಂಬುದು ಖಾತರಿಯಾಗಿತ್ತು ಸುಮಾರು 21,28,651 ರೂ.ಗಳ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳಲ್ಲಿ ಜೂನಿಯರ್‍ ಎಂಜಿನಿಯರ್, ನೀರಾವರಿ ಇಲಾಖೆಯ ಉಪವಿಭಾಗಾಧಿಕಾರಿ, ಲೆಕ್ಕಪರಿಶೋಧಕ ಮತ್ತು ಬ್ಯಾಂಕ್ ಅಧಿಕಾರಿ ಸೇರಿದ್ದಾರೆ. ಎಲ್ಲಾ ಒಂಬತ್ತು ಆರೋಪಿಗಳ ವಿರುದ್ಧ ಸೆಕ್ಷನ್ 406 (ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ), 420 (ವಂಚನೆ), 467 (ಮೌಲ್ಯಯುತ ಭದ್ರತೆಯ ನಕಲಿ), 468 (ವಂಚನೆಯ ಉದ್ದೇಶಕ್ಕಾಗಿ ನಕಲಿ), 471 (ನಕಲಿ ದಾಖಲೆ ಬಳಸಿ), 120- ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.

ರೋಜಕ ಮೆಯೋ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನುಹ್ ಜಿಲ್ಲಾ ಎಸ್‍ಪಿ ವರುಣ್ ಸಿಂಗ್ಲಾ ಹೇಳಿದ್ದಾರೆ.

Articles You Might Like

Share This Article