ಮರಣ ಪ್ರಮಾಣಪತ್ರಕ್ಕೂ ಲಂಚ, ಸಚಿವರಿಗೂ ತಲುಪುತ್ತಿದೆಯೇ ಪಾಲು..?

Social Share

ಬೆಂಗಳೂರು,ಆ.27- ಮರಣ ಪ್ರಮಾಣಪತ್ರ ಪಡೆಯಲು ಈ ಸರ್ಕಾರದಲ್ಲಿ ಲಂಚ ನೀಡಬೇಕಿದೆ. ಇದರ ಪಾಲು ಆರೋಗ್ಯ ಸಚಿವರಿಗೂ ತಲುಪುತ್ತಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಭ್ರಷ್ಟಾಚಾರದ ಕುರಿತು ಬೆಳಕಿಗೆ ಬಂದ ಪ್ರಕರಣವೊಂದರಲ್ಲಿ ಮರಣ ಪ್ರಮಾಣಪತ್ರ ನೀಡಲು 500 ರೂ. ಲಂಚ ಕೇಳಿರುವ ಮಾಹಿತಿ ಇದೆ.

ಇದನ್ನು ಆಧರಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದೆ. ನಮಗೆ ಕಾಂಗ್ರೆಸ್‍ನ ಪ್ರಮಾಣಪತ್ರ ಬೇಡ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಹೀಗೆ ಜನರೇ ನಿಮಗೆ ಲಂಚಾವತಾರದ ಪ್ರಮಾಣಪತ್ರ ಕೊಡುತ್ತಿದ್ದಾರೆ ನೋಡಿ ಎಂದು ಟೀಕಿಸಿದೆ.

ಮರಣ ಪ್ರಮಾಣಪತ್ರ ಪಡೆಯಲು ಲಂಚ ಕೊಡಬೇಕು. ಇಲ್ಲದಿದ್ದರೆ, ಲಂಚ-ಮಂಚದ ಸರ್ಕಾರಕ್ಕೆ ಅಪಮಾನ ಎನ್ನಲಾಗಿದ್ದು, ಈ ಕಮೀಷನ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಧಾಕರ್‍ಗೂ ತಲುಪುತ್ತಿದೆಯೇ ಎಂದು ಪ್ರಶ್ನಿಸಲಾಗಿದೆ.

Articles You Might Like

Share This Article