ತಿರುಗಿಬಿದ್ದ ಚೀನಾ ಸೇನೆ, ಗೃಹ ಬಂಧನದಲ್ಲಿ ಅಧ್ಯಕ್ಷ ಕ್ಸಿ ಜಿಂಪಿಂಗ್..!

Social Share

ಬೀಜಿಂಗ್, ಸೆ.24- ಚೀನಾದಲ್ಲಿ‌ ರಾಜಕೀಯ ಎದುರಾಳಿಗಳನ್ನು ಭ್ರಷ್ಟಚಾರದ ಆರೋಪಕ್ಕಾಗಿ ಶಿಕ್ಷಿಸುವ ಪರಿಪಾಠ ಹೆಚ್ಚಾದಂತೆ ಸೇನೆ ತಿರುಗಿಬಿದಿದ್ದು, ಅಧ್ಯಕ್ಷ ಕ್ಸಿ ಜಿಂಪಿಂಗ್ ರನ್ನು‌ಗೃಹ ಬಂಧನದಲ್ಲಿಟ್ಟಿದೆ.

ಕಳೆದ ಒಂದು ವಾರದಲ್ಲಿ‌ಭದ್ರತೆ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು‌ ಪ್ರಮುಖರನ್ನು ಭ್ರಷ್ಟಚಾರ ಪ್ರಕರಣದಲ್ಲಿ‌ ತಪ್ಪಿತಸ್ಥರು ಎಂದು‌ ಗುರುತಿಸಲಾಗಿದ್ದು ಎರಡು ವರ್ಷಗಳ‌ ಬಳಿಕ‌ ಮರಣ ದಂಡನೆ ವಿಧಿಸಲಾಗಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ‌ ಪಿಪಲ್ಸ್ ಲಿಬರೇಷನ್‌ ಅರ್ಮಿ ತಿರುಗಿ ಬಿದ್ದಿದೆ. ಅಧ್ಯಕ್ಷರನ್ನು ಗೃಹ ಬಂಧನದಲ್ಲಿರಿಸಿ ದೇಶವನ್ನು‌ ತೆಕ್ಕೆಗೆ ತೆಗೆದುಕೊಂಡಿದೆ ಎಂಬ ವರದಿಗಳಾಗಿವೆ. ಆದರೆ ಈ ವರದಿಯನ್ನು ಅಧಿಕೃತ ಸಂಸ್ಥೆಗಳು ಅಲ್ಲಗಳೆದಿಲ್ಲ ಅಥವಾ ಖಚಿತ ಪಡಿಸಿಲ್ಲ. ಈ ನಡುವೆ ಪಿಎಲ್ ಎ ಸರ್ವಾಧ್ಯಕ್ಷ ಸ್ಥಾನದಿಂದ ಕ್ಸಿ ಅವರನ್ನು‌ ತೆರವು‌ ಮಾಡಲಾಗಿದೆ.

Articles You Might Like

Share This Article