ಘಾಜï,ಮಾ.16-ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗೆ ಘಾಜಿಯಾಬಾದ್ನ ವಿಶೇಷ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಮರಣದಂಡನೆಗೆ ಗುರಿಯಾಗಿರುವ ಆರೋಪಿಯು 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾ ಲಯ ಮರಣದಂಡನೆ ವಿಧಿಸಿದೆ.
ಘಾಜಿಯಾಬಾದ್ ಪೋಕ್ಸೋ ನ್ಯಾಯಾಲಯವು ಶಿಕ್ಷೆಯನ್ನು ಪ್ರಕಟಿಸಿದೆ. ಸುಮಾರು 6 ತಿಂಗಳ ನಂತರ, ನ್ಯಾಯಾಲಯವು ಆರೋಪಿಗಳಿಗೆ ಐಪಿಸಿ ಸೆಕ್ಷನ್ 302, 363 ಮತ್ತು 376 ರ ಅಡಿಯಲ್ಲಿ ಶಿಕ್ಷೆ ವಿಸಿದೆ ಎಂದು ಘಾಜಿಯಾಬಾದ್ ಡಿಸಿಪಿ ಹೇಳಿದರು.
ಮೋದಿನಗರ ಪ್ರದೇಶದ ಹಳ್ಳಿಯೊಂದರಲ್ಲಿ ಅಪ್ರಾಪ್ತ ಬಾಲಕಿ ಶವವಾಗಿ ಪತ್ತೆಯಾಗಿದ್ದಳು. ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದು ತಿಳಿದುಬಂದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ಪೋಕ್ಸೋ ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.