ಪೇಶಾವರ,ಜ.31- ಪಾಕಿಸ್ತಾನದ ಮಸೀದಿ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 80ಕ್ಕೆರಿದೆ ಮಾತ್ರವಲ್ಲ 150 ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದು ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಸ್ಪೋಟಗೊಂಡ ಮಸೀದಿ ಅವಶೇಷದಡಿ ಸಿಲುಕಿ ಸಾವನ್ನಪಿರುವ ಶವಗಳನ್ನು ಇನ್ನು ಹೊರತೆಗೆಯಲಾಗುತ್ತಿದೆ. ಇಂದು ಬೆಳಿಗ್ಗೆ ಕುಸಿದ ಚಾವಣಿಯ ಕೊನೆ ಭಾಗ ತೆಗೆದುಹಾಕಿದ್ದೇವೆ. ಹೀಗಾಗಿ ಶವಗಳನ್ನು ಹೊರತೆಗೆಯಲು ಸುಲಭವಾಗಿದೆ.ಆದರೆ, ಅವಶೇಷಗಳಡಿ ಸಿಲುಕಿಕೊಂಡಿದ್ದ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆಗಳಿಲ್ಲ ಎಂದು ರಕ್ಷಣಾ ಸಂಸ್ಥೆ ವಕ್ತಾರ ಬಿಲಾಲ್ ಆಹ್ಮದ್ ತಿಳಿಸಿದ್ದಾರೆ.
ಘಟನೆಯಲ್ಲಿ ಕನಿಷ್ಠ 20 ಪೊಲೀಸರು ಸಾವನ್ನಪ್ಪಿದ್ದು, ಅವರ ಪಾರ್ಥಿವ ಶರೀರಗಳಿರಿಸಿರುವ ಶವಪೆಟ್ಟಿಗೆಗಳಿಗೆ ಪಾಕ್ ಧ್ವಜ ಹೊದಿಸಿ ಗೌರವ ಸೂಚಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.
ಅರೆ ಬೆತ್ತಲೆ ಮಹಿಳೆಯಿಂದ ವಿಮಾನ ಸಿಬ್ಬಂದಿಗೆ ಕಪಾಳಮೋಕ್ಷ
ಮಸೀದಿಯಲ್ಲಿ ನಿನ್ನೆ ಮಧ್ಯಾಹ್ನ ಇಮಾಮ್ ಪ್ರಾರ್ಥನೆ ಪ್ರಾರಂಭಿಸಿದ ಕೆಲವೇ ಸೆಕೆಂಡ್‍ಗಳಲ್ಲಿ ಸ್ಪೋಟ ಸಂಭವಿಸಿತು. ದಟ್ಟ ಕಪ್ಪು ಹೊಗೆ ಕಾಣಿಸುತ್ತಿದ್ದಂತೆ ನನ್ನ ಜೀವ ಉಳಿಸಿಕೊಳ್ಳಲು ನಾನು ಓಡಿ ಹೋದೆ ಎಂದು ಬದುಕುಳಿದಿರುವ 47 ವರ್ಷದ ಪೆಪೊಲೀಸ್ ಶಾಹಿದ್ ಆಲಿ ತಿಳಿಸಿದ್ದಾರೆ.
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿದಿರುವ ಸಂದರ್ಭದಲ್ಲಿ ಈ ಉಗ್ರ ಕೃತ್ಯ ನಡೆದಿದೆ. ಆದರೆ ಇದುವರೆಗೂ ಯಾವೊಂದು ಸಂಘಟನೆಗಳು ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ.
ಪಾಕಿಸ್ತಾನವನ್ನು ರಕ್ಷಿಸುವ ಕರ್ತವ್ಯವನ್ನು ನಿರ್ವಹಿಸುವವರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಭಯವನ್ನು ಸೃಷ್ಟಿಸಲು ಇಂತಹ ಕೃತ್ಯಗಳನ್ನು ನಡೆಸಲಾಗುತ್ತಿದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Death, toll, Pakistan, mosque, blast, rises,