ದಕ್ಷಿಣ ಕೊರಿಯಾ : ಹ್ಯಾಲೋವೀನ್ ಹಬ್ಬದ ವೇಳೆ ಕಾಲ್ತುಳಿತದಿಂದ 151 ಮಂದಿ ಸಾವು..!

Social Share

ಸಿಯೋಲ್, ಅ.30- ದಕ್ಷಿಣ ಕೊರಿಯಾದಲ್ಲಿ ನಡೆದ ಹ್ಯಾಲೋವೀನ್ ಹಬ್ಬ ಆಚರಣೆ ವೇಳೆ ಸಾವಿರಾರು ಜನರು ಒಮ್ಮೆಲೆ ಕಿರಿದಾದ ಇಳಿಜಾರು ಜಾಗದಲ್ಲಿ ನುಗಿದ ಪರಿಣಾಮ ಕಾಲ್ತುಳಿತ, ನೂಕುನುಗ್ಗಲು ಉಂಟಾಗಿ ಸುಮಾರು 151 ಮಂದಿ ಸಾವನ್ನಪ್ಪಿರುವ ಘಟನೆ ದೇಧಸ ರಾಜಧಾನಿ ಸಮೀಪವಿರುವ ವಿರಾಮ ಜಿಲ್ಲಾಯ ಇಟಾವೊನದಲ್ಲಿ ನಡೆದಿದೆ.

ಮೃತರು ಮತ್ತು ಗಾಯಗೊಂಡವರಲ್ಲಿ ಹೆಚ್ಚಿನವರು 20ರ ಆಸುಪಾಸಿನವರೇ ಆಗಿದ್ದು, ಸುಮಾರು 200ಕ್ಕೂ ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಸಿಯೋಲ್‍ನ ಯೋಂಗ್ಸಾನ್ ಅಗ್ನಿಶಾಮಕ ವಿಭಾಗದ ಮುಖ್ಯಸ್ಥ ಚೋಯ್ ಸಿಯೋಂಗ್‍ಬೀಮï ಹೇಳಿದ್ದಾರೆ.

ಕೊರೋನಾದಿಂದ ಕಳೆದ 2 ವರ್ಷ ತಟಸ್ಥವಾಗಿದ್ದ ಆಚರಣೆ ಮತ್ತೆ ಈಗ ಪ್ರಾರಂಭವಾಗಿದ್ದು ದೇಶದ ಅತಿದೊಡ್ಡ ಹ್ಯಾಲೋವೀನ್ ಹಬ್ಬ ಆಚರಣೆಗಾಗಿ ಇಟಾವೊನದಲ್ಲಿ ಅಂದಾಜು 100,000 ಜನರು ಸೇರಿದ್ದರು.

ದಕ್ಷಿಣ ಕೊರಿಯಾದಲ್ಲಿ ಇಟಾವಾನ್‍ನಲ್ಲಿರುವ ಬಾರ್‍ಗಳು, ಕ್ಲಬ್‍ಗಳು ಮತ್ತು ರೆಸ್ಟೋರೆಂಟ್‍ಗಳು ಹೆಸರು ವಾಸಿಯಾಗಿದ್ದು ಪ್ರವಾಸಿ ಸ್ನೇಹಿಪ್ರದೇಶವಾಗಿದೆ. ಪ್ರಮುಖ ಪಾರ್ಟಿ ಸ್ಥಳವಾದ ಹ್ಯಾಮಿಲ್ಟನ್ ಹೋಟೆಲ್ ಸಮೀಪವಿರುವ ಕಿರಿದಾದ ಇಳಿಜಾರಿನ ಭಾರೀ ಸಂಖ್ಯೆಯಲ್ಲಿದ್ದ ಜನಸಮೂಹವು ಏಕಾಏಕಿ ನುಗ್ಗಿದ ಈ ದುರಂತ ಸಂಭವಿಸಿದೆ.

ಮಲ್ಲೇಶ್ವರಂ ಶಾಲಾ ಮಾದರಿ ಇಡೀ ರಾಜ್ಯಕ್ಕೆ ವಿಸ್ತರಣೆ : ಸಿಎಂ

ಆನೇಕರು ಉಸಿರುಕಟ್ಟಿ ಸಾವನ್ನಪ್ಪಿದರೆ ಕೆಲವರು ತೀವ್ರವಾಗಿ ಗಾಯಗೊಂಡು ಅಸುನೀಗಿದ್ದಾರೆ. ಹೋಟೆಲ್ ಬಳಿ ಶವಗಳ ಸಾಲುಗಳನ್ನು ನೋಡುವುದು ಆಘಾತಕಾರಿಯಾಗಿದೆ. ರಸ್ತೆಗಳಲ್ಲಿ ಹೆಣದ ರಾಶಿ ಹೃದಯವಿದ್ರಾಹಕ ಸನ್ನಿವೇಶ ಸೃಷ್ಟಿಸಿದೆ.

ಕಲವರು ಕೆಳಗೆ ಬಿದ್ದರು ಅವನ್ನು ತುಳಿದುಕೊಂಡು ಕೆಲವರು ಮುಂದೆಹೋಗಿ ಬಿದಿದ್ದಾರೆ ಹಾಗೆಯೇ ಒಬ್ಬರ ಮೇಲೆ ಒಬ್ಬರು ಬಿದ್ದು ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬದುಕುಳಿದವರು ಅನೇಕರು ದುರಂತದ ಬಗ್ಗೆ ಮಾಹಿತಿ ನೀಡಿ ತಮ್ಮವರನ್ನು ಕಳೆದುಕೊಂಡ ನೋವಿನಲ್ಲ ಕಣ್ಣೀರು ಹಾಕಿದ್ದಾರೆ. ಮೃತದೇಹಗಳನ್ನು ಆಸ್ಪತ್ರೆಗಳು ಸಾಗಿಸಲಾಗುತ್ತಿದೆ. ಅಲ್ಲಿ ಮೃತರ ಗುರುತಿಸಲು ಅವಕಾಶ ಕಲ್ಪಿಸಲಾಗಿದೆ.

ಲಂಚದ ಸರ್ಕಾರದಲ್ಲಿ ನ್ಯಾಯಯುತ ಕೆಲಸ ಮಾಡಲು ಸಾಧ್ಯವೇ..?

ಇಂದು ರಾತ್ರಿ ಕೇಳಿದ ಭಯಾನಕ ಸುದ್ದಿ ಎಂದು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಟ್ವೀಟ್ ಮಾಡಿದ್ದಾರೆ. ಹಲವಾರು ಜಾಗತಿಕ ನಾಯಕರು ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

Articles You Might Like

Share This Article