ಸ್ಮಶಾನದಂತಾದ ವಯನಾಡು, ಎಲ್ಲೆದರಲ್ಲಿ ಮೃತದೇಹಗಳು, ಸಾವಿನ ಸಂಖ್ಯೆ 166ಕ್ಕೇರಿಕೆ

ವಯನಾಡ್‌,ಜು.31- ಇತಿಹಾಸದಲ್ಲೇ ಕಂಡು ಕೇಳರಿಯದ ಭೀಕರ ನರಕ ಸದೃಶವಾಗಿರುವ ಕೇರಳದ ವಯನಾಡ್‌ ಅಕ್ಷರಶಃ ಸಶಾನದಂತಾಗಿದೆ.ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ದಲ್ಲಿ ಮೃತರ ಸಂಖ್ಯೆ ಈವರೆಗೂ 166ಕ್ಕೆ ಏರಿಕೆಯಾಗಿದೆ. ಮಣ್ಣಿನ ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಸಿಬ್ಬಂದಿ ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಸುಮಾರು 400ಕ್ಕೂ ಹೆಚ್ಚು ಕುಟುಂಬಗಳು ಭೂಕುಸಿತದ ಭೀಕರತೆಗೆ ಸಿಲುಕಿ ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪರಿಹಾರ ಹಾಗೂ ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಭಾರತೀಯ ಸೇನೆ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. … Continue reading ಸ್ಮಶಾನದಂತಾದ ವಯನಾಡು, ಎಲ್ಲೆದರಲ್ಲಿ ಮೃತದೇಹಗಳು, ಸಾವಿನ ಸಂಖ್ಯೆ 166ಕ್ಕೇರಿಕೆ