ಜನಗಣತಿ ಮತ್ತಷ್ಟು ವಿಳಂಬ ಸಾಧ್ಯತೆ

Social Share

ನವದೆಹಲಿ,ಜ.6- ದಶಮಾನಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಜನಗಣತಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದ್ದು, ಈ ವರ್ಷದ ಸೆಪ್ಟಂಬರ್ ಬಳಿಕವೇ ನಡೆಯುವ ನಿರೀಕ್ಷೆ ಇದೆ. ಈ ಮೊದಲು ನಿಗದಿ ಪಡಿಸಿದ್ದ ವೇಳಾ ಪಟ್ಟಿಯ ಪ್ರಕಾರ 2020ರ ಏಪ್ರಿಲ್ 1ರಿಂದ ಸೆಪ್ಟಂಬರ್ 30ರ ನಡುವೆ ಮನೆ ಮನೆ ಸಮೀಕ್ಷೆ ಮತ್ತು ಜನಗಣತಿ ನಡೆಯಬೇಕಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕ ವ್ಯಾಪಿಸಿದ ಕಾರಣದಿಂದ ಗಣತಿ ಮುಂದೂಡಿಕೆಯಾಗಿದೆ.

ರಿಜಿಸ್ಟರ್ ಜನರಲ್- ಜನಗಣತಿಯ ಆಯುಕ್ತರ ಕಚೇರಿಯಿಂದ ಎಲ್ಲಾ ರಾಜ್ಯಗಳಿಗೆ ಮಾಹಿತಿ ನೀಡಿರುವ ಪ್ರಕಾರ ಆಡಳಿತಾತ್ಮಕ ಗಡಿ ನಿಗದಿಗೆ ಜೂನ್ 30ರವರೆಗೆ ಸಮಯ ವಿಸ್ತರಿಸಲಾಗಿದೆ. ನಿಯಮಗಳ ಪ್ರಕಾರ ಗಡಿ ನಿಗದಿ ಪಡಿಸಿದ ಮೂರು ತಿಂಗಳ ಬಳಿಕ ಜನಗಣತಿ ನಡೆಸಬೇಕಿದೆ.

ಅದಕ್ಕೂ ಮೊದಲು ಜಿಲ್ಲೆ, ಉಪವಿಭಾಗ, ತಾಲ್ಲೂಕು ಮತ್ತು ಪೊಲೀಸ್ ಠಾಣೆಗಳ ಆಡಳಿತಾತ್ಮಕ ಗಡಿಗಳನ್ನು ನಿಗದಿ ಪಡಿಸಬೇಕಿದೆ. ಈ ಪ್ರಕಾರ ಸೆಪ್ಟಂಬರ್ ವೇಳೆಗೆ ಜನಗಣತಿ ನಡೆಯಬೇಕಿದೆ.

ಬ್ರಿಟನ್ ರಾಜಕುಮಾರ ಹ್ಯಾರಿ ಆತ್ಮಚರಿತ್ರೆ ಬಿಡುಗಡೆಗೂ ಮುನ್ನವೇ ಸೋರಿಕೆ

ಈ ಹಿಂದೆ ಗಡಿರೇಖೆಗೆ ಗುರುತಿಸಲು ನಿಗದಿ ಪಡಿಸಲಾಗಿದ್ದ ಸಮಯವನ್ನು 2020ರ ಡಿಸೆಂಬರ್ 31ವರೆಗೆ ವಿಸ್ತರಣೆ ಮಾಡಲಾಗಿತ್ತು. ಅನಂತರ ಅದನ್ನು 2021 ಮತ್ತು 2022ನೆ ವರ್ಷಗಳ ಡಿಸೆಂಬರ್ 31ರವರೆಗೆ ಎರಡು ಬಾರಿ ವಿಸ್ತರಣೆ ಮಾಡಲಾಗಿದೆ. ಈಗ ಮತ್ತೆ ಸಮಯಾವಕಾಶ ನೀಡಲಾಗಿದೆ.

ಜನಗಣತಿ ಸಕ್ಷಮ ಪ್ರಾಕಾರದ ಅಕಾರಿಗಳು ರಾಜ್ಯಗಳಿಗೆ ಬರೆದಿರುವ ಪತ್ರದಲ್ಲಿ, ಜೂನ್ 30ರ ವೇಳೆಗೆ ನಿರ್ದೀಷ್ಟವಾದ ಗಡಿ ವ್ಯಾಪ್ತಿಗಳ ಕುರಿತು ಮಾಹಿತಿ ನೀಡಬೇಕು ಮತ್ತು ಈ ಕುರಿತ ಅಸೂಚನೆಗಳು, ಸುತ್ತೋಲೆಗಳನ್ನು ಜಣತಿ ಕಾರ್ಯಾಂಗದ ನಿರ್ದೇಶಕರಿಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ.

ಈ ಮೊದಲು ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಾಂಡ್ ಗಡಿಗಳ ಕುರಿತು 2020ರ ಅಕ್ಟೋಬರ್ ವೇಳೆಗೆ ಮಾಹಿತಿ ಪಡೆಯಲಾಗಿತ್ತು. ಈ ನಡುವೆ ಬಹಳಷ್ಟು ರಾಜ್ಯಗಳ ಆಡಳಿತಾತ್ಮಕ ಗಡಿಯನ್ನು ಬದಲಾವಣೆ ಮಾಡಿವೆ. ಹಾಗಾಗಿ ಸ್ಪಷ್ಟ ಮಾಹಿತಿ ನೀಡುವಂತೆ ಜನಗಣತಿ ಪ್ರಾಕಾರ ಸೂಚನೆ ನೀಡಿದೆ.

Decennial, census, September, freeze boundaries,

Articles You Might Like

Share This Article