ಪಂಚರಾಜ್ಯಗಳ ಚುನಾವಣೆ ಪ್ರಚಾರಕ್ಕೆ ಮತ್ತಷ್ಟು ನಿರ್ಬಂಧ..?

Social Share

ನವದೆಹಲಿ,ಜ.15- ದೇಶಾದ್ಯಂತ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಮಧ್ಯೆ, ಚುನಾವಣಾ ಆಯೋಗವು ಇಂದು ಸಭೆ ಸೇರಲಿದ್ದು, ಚುನಾವಣೆಗೆ ನಡೆಯುವ ಐದು ರಾಜ್ಯಗಳಲ್ಲಿ ಸಾರ್ವಜನಿಕ ರ್ಯಾಲಿಗಳು, ರೋಡ್‍ಶೂೀಗಳು ಮತ್ತು ನಿಷೇಧವನ್ನು ಜನವರಿ 15 ರ ನಂತರ ವಿಸ್ತರಿಸುವ ಕುರಿತು ಅಂತಿಮ ತೀರ್ಮಾನ ಮಾಡಲಿದೆ.
ಚುನಾವಣಾಆಯೋಗವು ರಾಜಕೀಯ ಪಕ್ಷಗಳ ಪ್ರಚಾರಕ್ಕಾಗಿ 16 ಅಂಶಗಳ ಮಾರ್ಗಸೂಚಿಗಳನ್ನು ಪಟ್ಟಿ ಮಾಡಿದೆ, ಈಗಾಗಲೆ ಸಾರ್ವಜನಿಕ ರಸ್ತೆಗಳು ಮತ್ತು ವೃತ್ತಗಳಲ್ಲಿ ಪ್ರಚಾರ ಸಭೆ ನಿಷೇಧಿಸಿದೆ, ಅಭ್ಯರ್ಥಿ ಸೇರಿ 5 ಮಂದಿ ಮನೆ-ಮನೆ ಪ್ರಚಾರಕ್ಕೆ ಅನುಮತಿಸಿದೆ ಅತಿ ಹೆಚ್ಚಾಗಿ ಸಾಮಾಜಿಕ ಜಾಲ ತಾಣ ಪ್ರಚಾರಕ್ಕೆ ಒತ್ತು ನೀಡಲಾಗಿದೆ.
ನಾಮಪತ್ರ ಸಲ್ಲಿಕೆ ವೇಳೆ ಎಷ್ಟು ಜನ ಇರಬೇಕು ಸೇರಿದಂತೆ ವಿವಿಧ ವಿಷಯ ಗಳು ಚರ್ಚೆಗೆ ಬರಲಿದೆ. ಐದು ರಾಜ್ಯಗಳ ಬಹು ನಿರೀಕ್ಷಿತ ವಿಧಾನಸಭೆ ಚುನಾವಣೆ ಫೆಬ್ರವರಿ 10 ರಿಂದ ಮಾರ್ಚ್ 7 ರ ನಡುವೆ ಏಳು ಹಂತಗಳಲ್ಲಿ ನಡೆಯಲಿದೆ ಎಂಬುದು ಗಮನಾರ್ಹವಾಗಿದೆ. ಮತಗಳ ಎಣಿಕೆ ನಂತರ ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Articles You Might Like

Share This Article