ದೆಹಲಿಯಲ್ಲಿ ವಿದೇಶಿ ಪ್ರಜೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

Social Share

ನವದೆಹಲಿ,ಮಾ.18- ದೆಹಲಿಯ ಗೀತಾ ಕಾಲೋನಿಯ ಕೆಳಸೇತುವೆ ಬಳಿ ವಿದೇಶಿ ಪ್ರಜೆಯೊಬ್ಬರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಮಾರಿಷಸ್ ಮೂಲದ ಬಗ್ವತ್ ಲುಚ್ಮಿ (66) ಎಂದು ಗುರುತಿಸಲಾಗಿದೆ. ಫೆಬ್ರವರಿ 6 ರಂದು ಪ್ರವಾಸಿ ವೀಸಾದಡಿ ಲಚ್ಮಿ ಭಾರತಕ್ಕೆ ಬಂದಿದ್ದರು. ಅವರ ಶವವನ್ನು ದಾರಿಹೋಕರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಿದ್ದರಾಮಯ್ಯ ದಮ್ಮು, ತಾಕತ್ತಿಗೆ ವರ್ತೂರು ಪ್ರಕಾಶ್ ಸವಾಲ್

ಬಹುಶಃ ಎರಡು ಮೂರು ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ದೇಹ ಕೊಳೆತ ಸ್ಥಿತಿಯಲ್ಲಿದ್ದು, ಆಸ್ಪತ್ರೆಯಲ್ಲಿ ಸಂರಕ್ಷಿಸಲಾಗಿದೆ.

ಸಾವಿಗೆ ನಿಖರ ಕಾರಣ ಕಂಡು ಹಿಡಿಯಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಾವಿಗೂ ಮೊದಲು ಅವರು ಭೇಟಿ ನೀಡಿದ ಪ್ರದೇಶಗಳ ಮಾಹಿತಿ ಸಂಗ್ರಹಿಸಿ ತನಿಖೆ ನಡೆಸಲಾಗುತ್ತಿದೆ.

Decomposed, Body, Foreign, National, Found, Delhi,

Articles You Might Like

Share This Article