ಜೂ.1 ರಂದು ಹಸೆಮಣೆ ಏರಲಿದ್ದಾರೆ ದೀಪಕ್ ಚಹರ್

Spread the love

ಮುಂಬೈ, ಮೇ 29- ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ದೀಪಕ್ ಚಹರ್ ಅವರು ಜೂನ್ 1 ರಂದು ತಮ್ಮ ದೀರ್ಘ ಕಾಲದ ಗೆಳತಿ ಜಯಾ ಭರದ್ವಾಜ್‍ರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಅಗ್ರಾದ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ಹಸೆಮಣೆ ಏರಲಿರುವ ದೀಪಕ್ ಹಾಗೂ ಜಯಾ ಅವರ ಮದುವೆಗೆ ಅದ್ಧೂರಿ ತಯಾರಿ ನಡೆದಿದ್ದು, ಈಗಾಗಲೇ ಎರಡು ಮನೆಯವರು ಅಗ್ರಾ ತಲುಪಿದ್ದಾರೆ.

ಮೇ 3 ರಂದು ನವದೆಹಲಿಯಲ್ಲಿ ಅರತಕ್ಷತೆಯ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ಹಲವು ಕ್ರಿಕೆಟ್ ದಿಗ್ಗಜರನ್ನು ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಭಾರತ ತಂಡದ ಹಾಲಿ ಹಾಗೂ ಮಾಜಿ ನಾಯಕರನ್ನಲ್ಲದೆ ತನ್ನ ಕೆಲವು ಆಪ್ತ ಗೆಳೆಯರನ್ನು ಕೂಡ ಆರತಕ್ಷತೆ ದೀಪಕ್ ಚಹರ್ ಆಹ್ವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ದೀಪಕ್ ಚಹರ್‍ರ ಕ್ರಿಕೆಟ್ ಜೀವನದಲ್ಲಿ ಮಹತ್ತರ ಪಾತ್ರ ವಹಿಸಿರುವ ಚೆನ್ನೈ ಸೂಪರ್ ಕಿಂಗ್ಸ್‍ನ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸಾಕ್ಷಿಯನ್ನು ವಿವಾಹಕ್ಕೆ ಆಹ್ವಾನಿಸಿದ್ದು ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ , ನಟಿ ಅನುಷ್ಕಾಶರ್ಮಾ, ಟೀಂ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ , ರಿತಿಕಾ ದಂಪತಿಗೂ ಆಹ್ವಾನ ಹೋಗಿದೆ.

ಟೀಂ ಇಂಡಿಯಾದ ಉಪನಾಯಕ ಕೆ.ಎಲ್.ರಾಹುಲ್, ಭುವನೇಶ್ವರ್‍ಕುಮಾರ್, ಜಸ್‍ಪ್ರೀತ್ ಬೂಮ್ರಾ, ಯಜುವೇಂದ್ರ ಚಹಾಲ್ ಸೇರಿದಂತೆ ಹಲವು ದಿಗ್ಗಜ ಕ್ರಿಕೆಟಿಗರಿಗೂ ಆಹ್ವಾನ ಹೋಗಿದೆ. ತನ್ನ ಬಾಲ್ಯದ ಗೆಳತಿಯೊಂದಿಗೆ ವಿವಾಹವಾಗುತ್ತಿರುವ ದೀಪಕ್ ಚಹರ್ ಅವರು 2021ರ ಐಪಿಎಲ್ ಪಂದ್ಯದ ವೇಳೆಯೇ ಕ್ರೀಡಾಂಗಣದಲ್ಲಿ ಮಂಡಿಯೂರಿ ಜಯಾಗೆ ಪ್ರಪೋಸ್ ಮಾಡುವ ಮೂಲಕ ಗಮನ ಸೆಳೆದಿದ್ದರು.

ಈ ಬಾರಿಯ ಐಪಿಎಲ್‍ನಲ್ಲಿ ಭಾರೀ ಮೊತ್ತಕ್ಕೆ ಸಿಎಸ್‍ಕೆ ಪಾಲಾಗಿದ್ದ ದೀಪಕ್ ಚಹರ್ ಬೆನ್ನು ನೋವಿನ ಸಮಸ್ಯೆಯಿಂದ ಇಡೀ ಟೂರ್ನಿಯಿಂದಲೇ ಹೊರಗುಳಿದಿದ್ದರು.

Facebook Comments