ರಸ್ತೆ ಗುಂಡಿಗಳಲ್ಲಿ ದೀಪಾವಳಿ ಆಚರಿಸಿ ವಿನೂತನ ಪ್ರತಿಭಟನೆ

Social Share

ಬೆಂಗಳೂರು,ಅ.25- ನಗರದ ರಸ್ತೆ ಗುಂಡಿ ಗಂಡಾಂತರದಿಂದ ರೋಸಿ ಹೋಗಿರುವ ಸಿಲಿಕಾನ್ ಸಿಟಿ ಮಂದಿ ರಸ್ತೆ ಗುಂಡಿಗಳಲ್ಲೇ ದೀಪಾವಳಿ ಆಚರಣೆ ಮಾಡುವ ಮೂಲಕ ಬಿಬಿಎಂಪಿ ವಿರುದ್ಧ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.

ನಗರದ ಬಹುತೇಕ ಪ್ರದೇಶಗಳ ರಸ್ತೆಗಳಲ್ಲಿ ವಾಹನ ಚಲಾಯಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಗುಂಡಿ ಗಂಡಾಂತರದಿಂದ ಈಗಾಗಲೇ ಹಲವಾರು ಅಮಾಯಕ ಜೀವಗಳು ಬಲಿಯಾಗಿದೆ. ಹಾಳಾಗಿರುವ ರಸ್ತೆ ಗುಂಡಿಗಳನ್ನು ಸರಿಪಡಿಸಿ ಎಂದರೆ ಮಳೆ ಮುಗಿಯಲಿ ಎಂಬ ಸಬೂಬು ಹೇಳುತ್ತಲೆ ಬಿಬಿಎಂಪಿ ಕಾಲ ಕಳೆಯುತ್ತಿದೆ.

ಇಂತಹ ಸಂದರ್ಭದಲ್ಲಿ ಬಿಬಿಎಂಪಿ ವಿರುದ್ಧ ವಿನೂತನ ಪ್ರತಿಭಟನೆ ನಡೆಸುವ ಮೂಲಕ ಜನ ತಿರುಗೇಟು ನೀಡಿದ್ದಾರೆ.ವಿಭಿನ್ನ ರೀತಿಯಲ್ಲಿ ದೀಪಾವಳಿ ಹಬ್ಬ ಅಚರಣೆ ಮಾಡಲು ನಿರ್ಧರಿಸಿದ ಐಟಿ ಬಿಟಿ ಮಂದಿ ರಸ್ತೆಗಳಲ್ಲಿರುವ ದೊಡ್ಡ ದೊಡ್ಡ ಗುಂಡಿಗಳಲ್ಲೇ ದೀಪಾವಳಿ ಆಚರಿಸಿ ಸಂಭ್ರಮ ಪಟ್ಟಿದ್ದಾರೆ.

ಸಿಲ್ಕï ಬೋರ್ಡ್ ಜಂಕ್ಷನ್, ಬನ್ನೇರುಘಟ್ಟ ಮುಖ್ಯ ರಸ್ತೆ, ಬಿಟಿಎಂ ಲೇಔಟ್ ಮತ್ತಿತರ ಪ್ರದೇಶಗಳಲ್ಲಿ ವಿಶೇಷವಾಗಿ ದೀಪಾವಳಿ ಆಚರಣೆ ಮಾಡುವ ಮೂಲಕ ಬಿಬಿಎಂಪಿಯ ಗಮನ ಸೆಳೆಯಲಾಗುತ್ತಿದೆ.

ಗುಂಡಿ ಇರುವ ಜಾಗಕ್ಕೆ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ ದೀಪಾವಳಿ ಆಚರಣೆ ಮಾಡುವ ಮೂಲಕ ಇನ್ನು ಮುಂದಾದರೂ ಹಾಳಾಗಿರುವ ನಗರದ ರಸ್ತೆಗಳನ್ನು ದುರಸ್ತಿ ಪಡಿಸಿ ಎಂದು ಸಾರ್ವಜನಿಕರು ಬಿಬಿಎಂಪಿಯನ್ನು ಆಗ್ರಹಿಸಿದ್ದಾರೆ.

“ಭಾರತಕ್ಕೆ ಮುಸ್ಲಿಂ ಪ್ರಧಾನಿ” ಟ್ವಿಟ್ಟರ್ ಟ್ರೆಂಡ್ ಗೆ ದ್ವನಿಗೂಡಿಸಿದ ನಟಿ ರಮ್ಯಾ

ಮಳೆ ಬಿಡುವ ನೀಡಿರುವುದರಿಂದ ಹಬ್ಬ ಮುಗಿದ ಕೂಡಲೇ ಗುಂಡಿ ಗಂಡಾಂತರಕ್ಕೆ ಮುಕ್ತಿ ಹಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ವಿನೂತನ ಪ್ರತಿಭಟನೆ ನಡೆಸುವ ಮೂಲಕ ನಗರದ ಮಾನವನ್ನು ಹರಾಜು ಹಾಕಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

Articles You Might Like

Share This Article