ದೀಪಾವಳಿ ವೇಳೆ ಅಗ್ನಿ ಅವಘಡ ತಡೆಯಲು ಮುಂಜಾಗ್ರತಾ ಕ್ರಮಗಳ ಸುತ್ತೋಲೆ

Social Share

ಬೆಂಗಳೂರು, ಅ.21- ದೀಪಾವಳಿಯ ಸಂದರ್ಭದಲ್ಲಿ ಯಾವುದೇ ಅಗ್ನಿ ಅನಾಹುತಗಳು ಮತ್ತು ದುರ್ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸುತ್ತೋಲೆ ರವಾನಿಸಿದೆ.

ಪಟಾಕಿ ಮಾರಾಟ, ದಾಸ್ತಾನು ಮತ್ತು ಬಳಕೆಯ ಸಂದರ್ಭದಲ್ಲಿ ಮಾರ್ಗಸೂಚಿಗಳನ್ನು ಪಾಲಿಸಬೇಕು, ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಎಚ್ಚರಿಸಲಾಗಿದೆ. ಪಟಾಕಿಗಳ ಮಾರಾಟಕ್ಕೆ ಜನನಿಬಿಡ ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಅವಕಾಶ ನೀಡಬಾರದು. ವಾಹನಗಳ ಸಂಚಾರಕ್ಕೆ ಕಷ್ಟವಾಗುವಂತಹ ಕಿರಿದಾದ ರಸ್ತೆಗಳನ್ನು ಹೊಂದಿರುವ ಸ್ಥಳಗಳಲ್ಲಿ ಪಟಾಕಿ ಮಾರಾಟ ಮಳಿಗೆಗಳಿರಬಾರದು.

ಖಾಯಂ ಅಂಗಡಿ ಅಥವಾ ಕಟ್ಟಡಗಳಲ್ಲಿ ಚಿಲ್ಲರೆ ಮಾರಾಟಗಳಿಗೆ ತಾತ್ಕಾಲಿಕ ಮಳಿಗೆ ತೆರೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ತೆರೆದ ಪ್ರದೇಶದಲ್ಲಿ ಸರ್ಕಾರದ ಸ್ಥಳೀಯ ಆಡಳಿತದ ಅನುಮತಿ ಪಡೆದು ಮಾರಾಟ ಮಳಿಗೆ ತೆರೆಯಬೇಕು. ಈ ಸ್ಥಳಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಪಟಾಕಿಗಳ ದಾಸ್ತಾನು ವೇಳೆಯಲ್ಲೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.

ಕಿತ್ತೊಯ್ತು 18 ಕೋಟಿ ರಸ್ತೆ, ಸೂಪರ್ ಆಗಿದೆ 4 ಲಕ್ಷ ರಸ್ತೆ

ತಾತ್ಕಲಿಕ ಪಟಾಕಿ ಮಾರಾಟ ಮಳಿಗೆಗಳಲ್ಲಿ ಎರಡೂ ಕಡೆಗಳಿಂದ ಸರಾಗವಾಗಿ ಗಾಳಿಯಾಡಬೇಕು. ಮಳಿಗೆ ನಿರ್ಮಿಸಲು ಉಪಯೋಗಿಸುವ ಸಾಮಾಗ್ರಿಗಳು ಸಾಧ್ಯವಾದಷ್ಟು ಬೆಂಕಿ ನಿರೋಧಕ ಲಕ್ಷಣಗಳನ್ನು ಹೊಂದಿರಬೇಕು.
ಪ್ರತಿ ಮಳಿಗೆಯಲ್ಲೂ 9 ಲೀಟರ್ ಸಾಮಥ್ರ್ಯದ ವಾಟರ್‍ಪ್ರೆಜರ್ ಮಾದರಿಯ ಅಗ್ನಿ ನಂದಕ ಹಾಗೂ ಎರಡು ಬಕೆಟ್‍ಗಳ ನೀರನ್ನು ದಾಸ್ತಾನು ಇಟ್ಟಿರಬೇಕು.

ಮಳಿಗೆಯ ಪಕ್ಕದಲ್ಲಿ ಎರಡು ಡ್ರಮ್‍ಗಳಲ್ಲಿ ಕನಿಷ್ಟ 4 ಲೀಟರ್ ನೀರು ಶೇಖರಿಸಿಟ್ಟಿರಬೇಕು. ಮಳಿಗೆಯಲ್ಲಿ ಅಥವಾ ಸುತ್ತಮುತ್ತ ಅಡುಗೆ ಮಾಡಲು ಅಥವಾ ಧೂಮಪಾನಕ್ಕೆ ಅವಕಾಶ ಇರಬಾರದು. ಹಗಲಿನ ವೇಳೆಯಲ್ಲಿ ಮಾತ್ರ ಪಟಾಕಿ ಮಾರಾಟ ಮಾಡಬೇಕು. ರಾತ್ರಿ ವೇಳೆ ಈ ಇಲ್ಲಿ ಯಾರೂ ಮಲಗಬಾರದು ಎಂದು ಸೂಚಿಸಲಾಗಿದೆ.

ಪಟಾಕಿ ಮಾರಾಟ ಮಳಿಗೆ ಪರಾವನಗಿ ಪಡೆಯುವವರು ಕಡ್ಡಾಯವಾಗಿ ಜಿಲ್ಲಾಧಿಕಾರಿಗಳು ಅಥವಾ ಪೊಲೀಸ್ ಆಯುಕ್ತರಿಗೆ 5 ಸಾವಿರ ರೂ.ಗಳ ಶುಲ್ಕವನ್ನು ಸರ್ಕಾರದ ಬೊಕ್ಕಸಕ್ಕೆ ಪಾವತಿಸಬೇಕು. ಅಗ್ನಿಶಾಮಕ ಇಲಾಖೆಯಿಂದ ಪ್ರತ್ಯೇಕವಾಗಿ ನಿರಪೇಕ್ಷಣಾ ಪತ್ರ ನೀಡಬೇಕಾದರೆ 5 ಸಾವಿರ ರೂ.ಗಳ ಶುಲ್ಕವನ್ನು ಸಂಗ್ರಹಿಸಬೇಕೆಂದು ಎಂದು ತನ್ನ ಇಲಾಖೆಯ ಅಧಿಕಾರಿಗಳಿಗೆ ಅಗ್ನಿಶಾಮಕ ದಳದ ಮಹಾನಿರ್ದೇಶಕರು ಸೂಚನೆ ನೀಡಿದ್ದಾರೆ.

ನ.24ರಿಂದ 26ರವರೆಗೆ ದೀಪಾವಳಿಯ ಸಂದರ್ಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಗಳು ತುರ್ತು ಸಮಯ ಸಂದರ್ಭ ಹೊರತುಪಡಿಸಿ ರಜೆ ಪಡೆಯಬಾರದು. ಅನ್ಯ ಸೇವೆಯ ಮೇಲೆ ಹೊರಗೆ ಹೋಗಬಾರದು.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಬದ್ದ : ರಾಹುಲ್ ಗಾಂಧಿ

24 ಗಂಟೆ ಕರೆಗೆ ತ್ವರಿತವಾಗಿ ಸ್ಪಂದಿಸಲು ಲಭ್ಯವಿರಬೇಕು. ಅಗ್ನಿಶಾಮಕ ಠಾಣೆಯಲ್ಲಿ ಎಲ್ಲ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟಿರಬೇಕು. ತುರ್ತು ಕರೆಗಳಿಗೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಇಲಾಖೆಯ ಮಹಾನಿರ್ದೇಶಕರು ಎಲ್ಲ ಕಚೇರಿಗಳಿಗೆ ಸುತ್ತೋಲೆ ರವಾನಿಸಿದ್ದಾರೆ.

Articles You Might Like

Share This Article