ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಷಯ ಕೋರಿದ ಸಿಎಂ

Social Share

ಬೆಂಗಳೂರು,ಅ.24-ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಗಣ್ಯರು ನಾಡಿನ ಜನತೆಗೆ ಶುಭಾಷಯಗಳನ್ನು ಕೋರಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಚಿವರು ಸೇರಿದಂತೆ ಮತ್ತಿತರರು ಬೆಳಕಿನ ದೀಪಾವಳಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಆಶಿಸಿದ್ದಾರೆ.

ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ ಅವರು, ನಾಡಿನ ಸಮಸ್ತ ಜನತೆಗೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಷಯಗಳು. ಸರ್ವರ ಬಾಳಲ್ಲಿ ಸಂಕಷ್ಟಗಳು ದೂರವಾಗಿ ಸುಖ ಶಾಂತಿ ಹಾಗೂ ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕಾರ್ಗಿಲ್‍ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಎಲ್ಲರಿಗೂ ಸಂಭ್ರಮ, ಸಂತೋಷದ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭ ಕಾಮನೆಗಳು ಈ ದೀಪಾವಳಿಯು ಎಲ್ಲರ ಜೀವನದಲ್ಲಿ ಆರೋಗ್ಯ, ಸುಖ, ಸಮೃದ್ಧಿಗಳ ಬೆಳಕನ್ನು ಹೊತ್ತು ತರಲಿ. ಎಲ್ಲೆಡೆ ಸಡಗರ, ಸಂಭ್ರಮ ಸದ್ಬಾವಗಳ ಹೊಂಬೆಳಕನ್ನು ಮೂಡಿಸಲಿ ಎಂದು ಪ್ರಾರ್ಥಿಸೋಣ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶುಭ ಕೋರಿದ್ದಾರೆ.

ಸ್ಪರ್ಧೆಯಿಂದ ಹಿಂದೆ ಸರಿದ ಜಾನ್ಸನ್‌, ರಿಷಿ ಬ್ರಿಟನ್‍ ಪ್ರಧಾನಿಯಾಗೋದು ಫಿಕ್ಸ್

ದೀಪಾವಳಿ ನಮ್ಮೆಲ್ಲರ ಬದುಕಿನಲ್ಲಿ ಸಕಾರಾತ್ಮಕ ಶಕ್ತಿ ಎಂಬ ಬೆಳಕನ್ನು ನಿತ್ಯವೂ ಹೊಸ ಹುಮ್ಮಸ್ಸಿನೊಂದಿಗೆ ಪ್ರಜ್ವಲಿಸಲಿ ಎಂದು ಪ್ರೀತಿ ಪೂರ್ವಕ ಹಾರೈಕೆ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬ , ಸುಖ. ಶಾಂತಿ, ನೆಮ್ಮದಿ, ಆಯುಷ್ಯ, ಆರೋಗ್ಯ, ಇಷ್ಟಾರ್ಥಗಳನ್ನು ಪೂರೈಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಪ್ರಾರ್ಥಿಸಿದ್ದಾರೆ. ಇದೇ ರೀತಿ ಸಚಿವರು ಸೇರಿದಂತೆ ಮತ್ತಿತರರು ಹಬ್ಬಕ್ಕೆ ಟ್ವೀಟರ್‍ನಲ್ಲಿ ಶುಭ ಹಾರೈಸಿದ್ದಾರೆ.

Articles You Might Like

Share This Article