ಮಾರಾಟ ಮಾಡಲು ಯತ್ನಿಸುತ್ತಿದ್ದ 9 ಜಿಂಕೆ ಕೊಂಬುಗಳ ವಶ

Social Share

ಬೆಂಗಳೂರು,ಜ.25-ಜಿಂಕೆ ಕೊಂಬು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ವಿಲ್ಸನ್‍ಗಾರ್ಡನ್ ಠಾಣೆ ಪೊಲೀಸರು ಬಂಧಿಸಿ 9 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ದಿಣ್ಣೂರು ಗ್ರಾಮದ ನಿವಾಸಿ ನರಸಿಂಹಪ್ಪ(60) ಬಂಧಿತ ವ್ಯಕ್ತಿ.
ಈತ ಶಾಂತಿನಗರದ ಬಸ್ ಡಿಪೋ ಸಮೀಪ ಚೀಲದಲ್ಲಿ ಜಿಂಕೆ ಕೊಂಬುಗಳನ್ನು ತುಂಬಿಕೊಂಡು ಬಂದು ಮಾರಾಟ ಮಾಡಲು ಯತ್ನಿಸುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ನರಸಿಂಹಪ್ಪನನ್ನು ಬಂಸಿ 9 ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಜಿಂಕೆ ಕೊಂಬುಗಳು ಎಲ್ಲಿ ಸಿಕ್ಕಿದವು, ಯಾರು ಮಾರಾಟಕ್ಕೆ ಕೊಟ್ಟರು, ಯಾವ ಕಾಡಿನಿಂದ ಕೊಂಬುಗಳನ್ನು ತರಲಾಗಿದೆ. ಯಾರಿಗೆ ಮಾರಾಟ ಮಾಡಲು ಬಂದ್ದನೆಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Articles You Might Like

Share This Article