ರಕ್ಷಣಾ ಇಲಾಖೆಯ ಕಪ್ಪು ಪಟ್ಟಿ ಸೇರಿದ ಬೆಂಗಳೂರು ಮೂಲದ ಏವಿಯೇಷನ್ ಸಂಸ್ಥೆ

Social Share

ನವದೆಹಲಿ,ಡಿ.10- ಅಗಸ್ಟಾ ವೆಸ್ಟ್‍ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಅವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪಕ್ಕೆ ಗುರಿಯಾಗಿರುವ ಬೆಂಗಳೂರು ಮೂಲದ ಸಂಸ್ಥೆಯೊಂದಿಗಿನ 58 ಸಾವಿರ ಕೋಟಿ ರೂ.ಗಳ ವ್ಯಾಪಾರ ವಹಿವಾಟನ್ನು ರಕ್ಷಣಾ ಸಚಿವಾಲಯ ರದ್ದುಗೊಳಿಸಿದೆ.

ಭಾರತಕ್ಕೆ 12 ವಿವಿಐಪಿ ಹೆಲಿಕಾಪ್ಟರ್‍ಗಳನ್ನು ಪೂರೈಸುವ 3,546 ಕೋಟಿ ವ್ಯವಹಾರದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ 2019 ರಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಸುಷೇನ್ ಗುಪ್ತಾ ಎಂಬುವರು ಬಿಡುಗಡೆಯಾದ ನಂತರ ಬೆಂಗಳೂರಿನಲ್ಲಿ ನಡೆಸುತ್ತಿರುವ ಡೆಫ್ಸಿಸ್ ಎಂಬ ಸಂಸ್ಥೆಯನ್ನು ಅಮಾನತುಗೊಳಿಸಿದ ಸಂಸ್ಥೆಗಳ ಪಟ್ಟಿಗೆ ರಕ್ಷಣಾ ಇಲಾಖೆ ಸೇರಿಸಿದೆ.

ಗಡಿ ಸಂಘರ್ಷ : ಸೋಮವಾರ ಅಮಿತ್ ಷಾ ಜತೆ ಸಂಸದರ ಮಾತುಕತೆ

ರಫೇಲ್ ಫೈಟರ್ ಜೆಟ್‍ಗಳನ್ನು ತಯಾರಿಸುತ್ತಿರುವ ಫ್ರೆಂಚ್ ಮೂಲದ ಡಸಾಲ್ಟ ಏವಿಯೇಷನ್ ಸಂಸ್ಥೆ ರಿಲಯನ್ಸ್ ಗ್ರೂಪ್‍ನೊಂದಿಗೆ 2017ರಲ್ಲಿ ಜಂಟಿ ಉದ್ಯಮ ಕೂಟವೊಂದನ್ನು ರಚಿಸಿಕೊಂಡಿದೆ.

ಡಸಾಲ್ಟ್ ಏವಿಯೇಷನ್ ಸಂಸ್ಥೆ ಕೂಡ ಡೆಫ್ಸಿಸ್ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಒಪ್ಪಂದದ ಭಾಗವಾಗಿ ಡೆಫ್ಸಿಸ್ ಸಂಸ್ಥೇ 50 ರಫೇಲ್ ಯುದ್ಧ ವಿಮಾನಗಳನ್ನು ಡಸಾಲ್ಟ್ ಸಂಸ್ಥೆಗೆ ಪೂರೈಕೆ ಮಾಡಿದೆ.
2007 ರಲ್ಲಿ ಸ್ಥಾಪಿತವಾದ ಡೆಫ್ಸಿಸ್ ಸೊಲ್ಯೂಷನ್ಸ್ ವಿವಿಧ ರಕ್ಷಣಾ ಮತ್ತು ಏರೋಸ್ಪೇಸ್ ಅಪ್ಲಿಕೇಶನ್‍ಗಳಿಗೆ ಸುಧಾರಿತ ಪರಿಹಾರಗಳನ್ನು ಒದಗಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ಹೇಳಿಕೊಂಡಿದೆ.

ಹಿಮಾಚಲ ಸಿಎಂ ಆಯ್ಕೆ ಜವಾಬ್ದಾರಿ ಪ್ರಿಯಾಂಕ ಹೆಗಲಿಗೆ

ಕಂಪನಿಯು ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ ಸಿಸ್ಟಮ್ಸï, ಎಲೆಕ್ಟ್ರೋ-ಆಪ್ಟಿಕಲ್ ಪೇಲೋಡ್‍ಗಳು, ಥರ್ಮಲ್ ಇಮೇಜರ್‍ಗಳು, ಫ್ಲೈಟ್ ಮತ್ತು ಫೈರಿಂಗ್ ಸಿಮ್ಯುಲೇಟರ್‍ಗಳು, ವೆಪನ್ ರೆಪ್ಲಿಕಾಸï, ಎಲೆಕ್ಟ್ರೋ-ಮೆಕ್ಯಾನಿಕಲ್ ಸಿಸ್ಟಮ್‍ಗಳು, ಆನ್ -ಬೋರ್ಡ್ ಎಲೆಕ್ಟ್ರಾನಿಕ್ ಉಪ-ವ್ಯವಸ್ಥೆಗಳು, ಸ್ವಯಂಚಾಲಿತ ಪರೀಕ್ಷಾ ಸಲಕರಣೆಗಳು (ಎಟಿಇಗಳು), ಆರ್‍ಎಫ್ ಮತ್ತು ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ.

ಮೈಕ್ರೋವೇವ್ ಸಬï-ಅಸೆಂಬ್ಲೀಸ್, ರಾಡಾರ್ ಮತ್ತು ಸೀಕರ್ ಸಿಮ್ಯುಲೇಟರ್‍ಗಳು ಮತ್ತು ಮಾಪನ ವ್ಯವಸ್ಥೆಗಳು. ಕಂಪನಿಯು ಅಸ್ತಿತ್ವದಲ್ಲಿರುವ ಮಿಲಿಟರಿ ವ್ಯವಸ್ಥೆಗಳ ನಿರ್ವಹಣೆ ಮತ್ತು ಆನï-ಸೈಟ್ ನವೀಕರಣದಂತಹ ಹಲವಾರು ಬೆಂಬಲ ಸೇವೆಗಳನ್ನು ಸಹ ಒದಗಿಸುತ್ತಿದೆ.

Defence ministry, suspends, business, Defsys Solutions,

Articles You Might Like

Share This Article