ಬುಲ್ಲಿ ಬಾಯಿ ಆ್ಯಪ್ : ಡೆಹ್ರಾಡೂನ್‍ನಲ್ಲಿ 18 ವರ್ಷದ ಯುವತಿ ಬಂಧನ

Social Share

ಮುಂಬೈ,ಜ.5- ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸಿ ಅವರು ಹರಾಜಿಗಿದ್ದಾರೆ ಎಂದು ಆಕ್ಷೇಪಾರ್ಹ ಚಿತ್ರಗಳನ್ನು ಬುಲ್ಲಿ ಬಾಯಿ ಆ್ಯಪ್‍ನಲ್ಲಿ ಅಪ್‍ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಡೆಹ್ರಾಡೂನ್‍ನಲ್ಲಿ 18 ವರ್ಷದ ಯುವತಿಯೊಬ್ಬಳನ್ನು ಬಂಧಿಸಿದ್ದಾರೆ.
ಇದು ಈ ಪ್ರಕರಣದಲ್ಲಿ 2ನ ವ್ಯಕ್ತಿಯ ಬಂಧನವಾಗಿದೆ. ಈ ಮುನ್ನ ಇಂದು ಬೆಳಗ್ಗೆ ಬೆಂಗಳೂರಿನಲ್ಲಿ 21 ವರ್ಷ ವಯಸ್ಸಿನ ಎಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್‍ಕುಮಾರ್ ಝಾ ಎಂಬಾತನನ್ನು ಪೊಲೀಸರು ಸೆರೆ ಹಿಡಿದರು. ಬಾಂದ್ರಾ ನ್ಯಾಯಾಲಯವು ಝಾನನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
18 ವರ್ಷದ ಯುವತಿಯನ್ನು ಬಂಧಿಸಿರುವ ಮುಂಬೈ ಪೊಲೀಸರು ನ್ಯಾಯಾಲಯದ ಮುಂದೆ ಆಕೆಯನ್ನು ಹಾಜರುಪಡಿಸುವ ಸಲುವಾಗಿ ಮುಂಬೈಗೆ ಕರೆದೊಯ್ಯಲು ಮಹಿಳಾ ಕಾನ್‍ಸ್ಟೆಬಲ್ ಒಬ್ಬರು ಮುಂಬೈನಿಂದ ಉತ್ತರಾಖಂಡ ತಲುಪುವುದನ್ನು ಕಾಯುತ್ತಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಉತ್ತರಾಖಂಡದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಯುವತಿ ಪ್ರೌಢಶಿಕ್ಷಣ ಪೂರೈಸಿ ಕಾಲೇಜು ಪ್ರವೇಶ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದಳು ಎಂದು ಅವರು ಹೇಳಿದ್ದಾರೆ.

Articles You Might Like

Share This Article