ನವದೆಹಲಿ,ಜ.5- ಕೋವಿಡ್ -19 ಮೂರನೇ ಅಲೆ ಆರಂಭವಾಗಿದ್ದು ಇಂದು ಸುಮಾರು 10,000 ಪ್ರಕರಣಗಳು ವರದಿ ಯಾಗಲಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. “ದೆಹಲಿಯು ಇಂದು ಸುಮಾರು 10,000 ಕೋವಿಡ್ ಸೋಂಕನ್ನು ವರದಿ ಆಗುವ ಸಾಧ್ಯತೆಯಿದೆ, ದೈನಂದಿನ ಧನಾತ್ಮಕತೆಯ ಪ್ರಮಾಣವು ಸುಮಾರು 10% ಕ್ಕೆ ಏರುತ್ತದೆ. ಕೋವಿಡ್ -19 ನ ಮೂರನೇ ಅಲೆ ಪ್ರಾರಂಭವಾಗಿದೆ, ”ಎಂದು ಅವರು ಹೇಳಿದರು.
ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ 2% ಬೆಡ್‌ಗಳು ಭರ್ತಿಯಾಗಿದ್ದು, 10% ರಿಂದ 40% ಕ್ಕೆ ಹೆಚ್ಚಿಸಲು ದೆಹಲಿ ಸರ್ಕಾರವು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆ 5,481 ಹೊಸ ಕೋವಿಡ್ ಪ್ರಕರಣಗಳು ದೃಢ ಪಟ್ಟಿದ್ದು, ಪ್ರಸ್ತುತ 14,889 ಸಕ್ರಿಯ ಪ್ರಕರಣಗಳಿವೆ.
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಈ ವಾರದಿಂದ ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ ವಿಧಿಸಲು ನಿರ್ಧರಿಸಿದೆ. ಕರ್ಫ್ಯೂ ಅವಧಿಯಲ್ಲಿ ಅಗತ್ಯ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
