ನವದೆಹಲಿ,ಜ.5- ದೆಹಲಿಯಲ್ಲಿ ಮತ್ತೊಂದು ಭೀಕರ ಅಪಘಾತ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸ್ವಿಗ್ಗಿ ಫುಡ್ ಡಿಲಿವರಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಯುವಕನನ್ನು ಅಪರಿಚಿತ ವಾಹನವೊಂದು ಸುಮಾರು ಕಿಲೋ ಮೀಟರ್ ದೂರ ಎಳೆದೊಯ್ದಿರುವುದು ಪತ್ತೆಯಾಗಿದೆ.
ಹೊಸ ವರ್ಷಾಚರಣೆಯ ದಿನ ಐವರು ಪಾನಮತ್ತ ಯುವಕರಿದ್ದ ಕಾರು 20 ವರ್ಷದ ಯುವತಿ ಅಂಜಲಿಸಿಂಗ್ಗೆ ಡಿಕ್ಕಿ ಹೊಡೆದು 12 ಕಿಲೋ ಮೀಟರ್ ದೂರದವರೆಗೂ ಎಳೆದುಕೊಂಡು ಹೋಗಿರುವುದು ದೆಹಲಿಯ ನಾಗರೀಕರನ್ನು ಬೆಚ್ಚಿ ಬೀಳಿಸಿತ್ತು. ಈ ಅಪಘಾತ ನಡೆದ ಒಂದು ಅಂತರದಲ್ಲಿ ಮತ್ತೊಂದು ಭೀಕರ ಅಪಘಾತ ನಡೆದಿದೆ.
ಉತ್ತರ ಪ್ರದೇಶದ ಮೈನಾಪುರಿಯ ಕುಶಾಲ್ ಯಾದವ್ ಸ್ವಿಗ್ಗಿ ಫುಡ್ಡಿಲಿವರಿ ಕೆಲಸ ಮಾಡುತ್ತಿದ್ದ. ಹೊಸ ವರ್ಷದ ದಿನ ಮಧ್ಯ ರಾತ್ರಿ 1ಗಂಟೆಗೆ ಸುಮಾರಿಗೆ ನೋಯಿಡಾದ ಸೆಕ್ಟರ್ 14ರ ಮೇಲು ಸೇತುವೆ ಮೇಲೆ ವಾಹನವೊಂದು ಡಿಕ್ಕಿ ಹೊಡೆದಿದೆ. ದ್ವಿಚಕ್ರವಾಹನದಿಂದ ಕೆಳಗೆ ಬಿದ್ದ ಕುಶಾಲ್ ವಾಹನದ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದಾನೆ ಅಲ್ಲಿಂದ ಸುಮಾರು ಒಂದು ಕಿಲೋ ಮೀಟರ್ ದೂರದ ಶನಿ ದೇವಸ್ಥಾನದವರೆಗೂ ಆತನ ದೇಹವನ್ನು ವಾಹನ ಎಳೆದುಕೊಂಡು ಹೋಗಿದೆ.
ಕೊರೊನಾ ಉಪತಳಿ ಕ್ರಾಕೆನ್ ಕುರಿತು ಇಸ್ರೆಲ್ ತಜ್ಞ ವೈದ್ಯರ ಎಚ್ಚರಿಕೆ
ಅಲ್ಲಿ ಚಾಲಕ ವಾಹನ ನಿಲ್ಲಿಸಿ ಪರಾರಿಯಾಗಿದ್ದಾನೆ. ಅದೇ ವೇಳೆಗೆ ಕುಶಾಲ್ ಯಾದವ್ ಅವರ ಮನೆಯಿಂದ ಫೋನ್ ಬಂದಿದೆ. ಕರೆ ಸ್ವೀಕರಿಸಿದ ವ್ಯಕ್ತಿಯೊಬ್ಬರು ನಿಮ್ಮ ಮಗನಿಗೆ ಅಪಘಾತವಾಗಿದೆ. ಶನಿ ದೇವಸ್ಥಾನದ ಬಳಿ ರಸ್ತೆ ಬದಿ ಬಿದ್ದಿದ್ದಾನೆ. ಬಂದು ನೋಡಿಕೊಳ್ಳಿ ಎಂದು ಹೇಳಿ, ಕರೆ ಕಡಿತ ಮಾಡಿದ್ದಾನೆ ಪರಾರಿಯಾಗಿದ್ದಾನೆ.
ಕುಟುಂಬದ ಸದಸ್ಯರ ದೂರು ಆಧರಿಸಿ ಪ್ರಕರಣ ದಾಖಲಿಸಿರುವ ಪೊಲೀಸರು, ಅಪರಿಚಿತ ವಾಹನ ಮತ್ತು ಅದರ ಚಾಲಕನ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
Delhi, accident, Swiggy delivery, killed, car hits , drags , 1 km, Noida,