ದೀಪಾವಳಿ ಮುನ್ನವೇ ದೆಹಲಿ ಗಾಳಿ ಮತ್ತಷ್ಟು ಮಲೀನ

Social Share

ನವದೆಹಲಿ,ಅ.22- ದೀಪಾವಳಿ ಹಬ್ಬ ಆರಂಭಕ್ಕೂ ಮುನ್ನವೇ ರಾಷ್ಟ್ರ ರಾಜಧಾನಿ ದೆಹಲಿ ಮಲಿನ ದುಪ್ಪಟ್ಟಾಗಿದೆ.
ಹಬ್ಬ ಆರಂಭಕ್ಕೂ ಮುನ್ನವೆ ಈ ರೀತಿಯಾದರೆ, ಹಬ್ಬದ ನಂತರ ದೆಹಲಿ ಪರಿಸ್ಥಿತಿ ಹೇಗಿರಲಿದೆ ಎಂಬ ಚಿಂತೆ ಪರಿಸರ ಪ್ರೇಮಿಗಳನ್ನು ಕಾಡತೊಡಗಿದೆ.

ಈಗಾಗಲೇ ಕಲುಷಿತ ನಗರವೆಂಬ ಕುಖ್ಯಾತಿಗೆ ಒಳಗಾಗಿರುವ ದೆಹಲಿಯ ಗಾಳಿ ಗುಣಮಟ್ಟ ಕಳಪೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆದರೂ, ಗಾಳಿಯ ಗುಣಮಟ್ಟ ಕಾಪಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಯಾವುದೆ ಪ್ರಯೋಜನವಾಗುತ್ತಿಲ್ಲ.

ದೆಹಲಿಯಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ತಡೆಯಲು ಏರ್ ಕ್ವಾಲಿಟಿ ಮ್ಯಾನೇಜ್‍ಮೆಂಟ್ ಆಯೋಗ ತುರ್ತು ಸಭೆ ನಡೆಸಿದ್ದರೂ, ದೀಪಾವಳಿಗೆ ಒಂದೆರಡು ದಿನಗಳು ಬಾಕಿ ಇರುವಾಗ ದೆಹಲಿಯ ಆಕಾಶದಲ್ಲಿ ದಟ್ಟವಾದ ಹೊಗೆಯ ಪದರ ಕಂಡು ಬಂದಿರುವುದು ಆತಂಕ ಸೃಷ್ಟಿಸಿದೆ.

ಚೀನಾ ಅಧ್ಯಕ್ಷರಾಗಿ 3ನೇ ಅವಧಿಗೆ ಕ್ಸಿ ಜಿನ್‍ಪಿಂಗ್ ಆಯ್ಕೆ ಖಚಿತ

ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು ಮತ್ತು ತೆರೆದ ತಿನಿಸುಗಳಲ್ಲಿ ಡೀಸೆಲ್ ಜನರೇಟರ್‍ಗಳು, ಕಲ್ಲಿದ್ದಲು ಮತ್ತು ಉರುವಲುಗಳ ಬಳಕೆಯನ್ನು ನಿಷೇಧಿಸುವುದನ್ನು ಒಳಗೊಂಡಿರುವುದು ಸೇರಿದಂತೆ ಗಾಳಿಯ ಗುಣಮಟ್ಟ ಕಾಪಾಡಲು ಮತ್ತಷ್ಟು ತ್ವರಿತ ಕ್ರಮಗಳನ್ನು ದೆಹಲಿಯಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

Articles You Might Like

Share This Article