ಅಬಕಾರಿ ಹೊಸ ನೀತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ

Social Share

ನವದೆಹಲಿ, ಜ.3- ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರದ ಹೊಸ ಅಬಕಾರಿ ನೀತಿಯನ್ನು ವಿರೋಧಿಸಿ ಬಿಜೆಪಿ ದೆಹಲಿಯಲ್ಲಿ ಚಕ್ಕ ಜಾಮ್ ಪ್ರತಿಭಟನೆಯನ್ನು ಆಯೋಜಿಸಿದೆ.
ಬಿಜೆಪಿ ಅಧ್ಯಕ್ಷ ಅದೇಶ್ ಗುಪ್ತಾ ಅವರ ನೇತೃತ್ವದಲ್ಲಿ ಅಕ್ಷರಧಾಮ ದೇವಸ್ಥಾನದಿಂದ ಆರಂಭವಾದ ಪ್ರತಿಭಟನೆ, ದೆಹಲಿಯಲ್ಲಿ ನಾನಾ ಕಡೆ ನಡೆದಿದೆ. ಹಲವು ರಸ್ತೆಗಳನ್ನು ತಡೆ ಹಿಡಿದಿದ್ದು, ಸಂಚಾರ ಅಸ್ತವ್ಯಸ್ಥವಾಗಿದೆ.
ಹೊಸ ಅಬಕಾರಿ ನೀತಿಯ ಪ್ರಕಾರ ದೆಹಲಿ ನಗರದ ಬೀದಿ ಬೀದಿಗಳಲ್ಲಿ ಮದ್ಯದಗಂಡಿಗಳನ್ನು ತೆರೆಯಬಹುದು. ಜನವಸತಿ ಹಾಗೂ ಧಾರ್ಮಿಕ ಮಂದಿಗಳ ಸಮೀಪ ಮದ್ಯದಂಗಡಿ ತೆರೆಯಲು ಇದ್ದ ನಿರ್ಬಂಧವನ್ನು ತೆರವು ಮಾಡಲಾಗಿದೆ. ಇದನ್ನು ಪ್ರತಿಪಕ್ಷ ಬಿಜೆಪಿ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿದೆ.

Articles You Might Like

Share This Article