ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಆಸೆ ಜೀವಂತ : ರಿಕ್ಕಿ ಪಾಂಟಿಂಗ್

Spread the love

ಮುಂಬೈ, ಮೇ 9- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 91 ರನ್‍ಗಳ ಭಾರೀ ಅಂತರದಿಂದ ಸೋಲು ಕಂಡಿದ್ದರೂ ಕೂಡ ನಮ್ಮ ತಂಡವು ಪ್ಲೇಆಫ್‍ಗೇರುತ್ತದೆ ಎಂಬ ಆತ್ಮವಿಶ್ವಾಸದ ಮಾತುಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ತರಬೇತುದಾರ ರಿಕ್ಕಿ ಪಾಂಟಿಂಗ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂಡದ ನಾಯಕ ರಿಷಭ್ ಪಂತ್ ಸೇರಿದಂತೆ ತಂಡದಲ್ಲಿರುವ ಸ್ಟಾರ್ ಬ್ಯಾಟ್ಸ್‍ಮನ್‍ಗಳು ಚೆನ್ನೈ ಸೂಪರ್ ಕಿಂಗ್ಸ್ ನ ಬೌಲರ್‍ಗಳ ಎದುರು ಎಡವಿದ್ದರಿಂದಲೇ ನಾವು ಸೋಲು ಕಂಡಿದ್ದೇವೆ, ಅದು ಅಲ್ಲದೆ ನಾಯಕ ರಿಷಭ್ ಪಂತ್ ಅವರು ಬೌಲರ್‍ಗಳನ್ನು ಸರಿಯಾಗಿ ಬಳಸಿಕೊಳ್ಳದಿದ್ದುದು ಕೂಡ ತಂಡವು ಸೋಲುವಂತಾಗಿದೆ.

ನಮ್ಮ ತಂಡವು ಆಡಿರುವ 11 ಪಂದ್ಯಗಳಲ್ಲಿ 5ರಲ್ಲಷ್ಟೇ ಗೆಲುವು ಸಾಧಿಸಿದ್ದೇವೆ, ಕಳೆದ ಪಂದ್ಯದಲ್ಲಿ 91 ರನ್‍ಗಳ ಭಾರೀ ಅಂತರದಿಂದ ಸೋಲು ಕಂಡಿರುವುದರಿಂದ ನಮ್ಮ ರನ್‍ರೇಟ್ ಮೇಲೂ ಗಾಢವಾದ ಪರಿಣಾಮ ಬೀರಿದೆ, ಆದರೆ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಲಿದ್ದೇವೆ ಎಂದು ತಿಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉಳಿದಿರುವ 3 ಪಂದ್ಯಗಳಲ್ಲೂ ಕೂಡ ಭಾರೀ ಅಂತರದ ಗೆಲುವು ಸಾಧಿಸುವ ಮೂಲಕ ಪ್ಲೇಆಫ್‍ಗೇರುತ್ತೇವೆ ಎಂಬ ಭರವಸೆ ನನ್ನಲ್ಲಿದೆ, ಅದಕ್ಕೆ ತಕ್ಕಂತೆ ಆಟಗಾರರಿಂದಲೂ ಉತ್ತಮ ಪ್ರದರ್ಶನ ಹೊಮ್ಮಿ ಬರಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ರಿಕ್ಕಿ ಪಾಂಟಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೈದಾನದ ಹೊರಗೆ ಕುಳಿತು ಸಲಹೆ ನೀಡುವುದು ಸುಲಭ ಆದರೆ ಮೈದಾನದಲ್ಲಿ ಅದನ್ನು ಕಾರ್ಯಗತಕ್ಕೆ ತರುವುದು ಎಷ್ಟು ಕಷ್ಟ ಎಂಬುದು ನನಗೆ ಗೊತ್ತಿದೆ ಅದೇ ಸಮಸ್ಯೆಯನ್ನು ರಿಷಭ್ ಪಂತ್ ಕೂಡ ಎದುರಿಸುತ್ತಿದ್ದಾರೆ ಎಂದು ರಿಕ್ಕಿ ಪಾಂಟಿಂಗ್ ಹೇಳಿದರು.

Facebook Comments