ಜನರ ಜೀವನೋಪಾಯದ ಆದಷ್ಟು ಬೇಗ ಸರಾಗಗೊಳಿಸಲಾಗುವುದು : ಕೇಜ್ರಿವಾಲ್

Social Share

ನವದೆಹಲಿ,ಜ. 25-ಜನರ ಜೀವನೋಪಾಯಕ್ಕೆ ತೊಂದರೆಯಾಗುವುದನ್ನು ತಮ್ಮ ಸರ್ಕಾರ ಬಯಸುವುದಿಲ್ಲ ಮತ್ತು ಕೋವಿಡ್ ನಿರ್ಬಂಧಗಳನ್ನು ಆದಷ್ಟು ಬೇಗ ಸರಾಗಗೊಳಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ಸರ್ಕಾರದಿಂದ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು ದೆಹಲಿಯಲ್ಲಿ ಕೊರೊನಾ ದಿಂದ  ಹೆಚ್ಚು ಜನ ಬಳಲುತ್ತಿದ್ದಾರೆ. ನಿರ್ಬಂಧಗಳನ್ನು ಹೇರಿ ನಿಮ್ಮ ಜೀವನೋಪಾಯದ ಮೇಲೆ ಪರಿಣಾಮ ಬೀರುವುದನ್ನು ನಾವು ಬಯಸುವುದಿಲ್ಲ ಆದರೆ ನಿಮ್ಮ ಆರೋಗ್ಯವು ಮುಖ್ಯವಾಗಿದೆ, ಆದ್ದರಿಂದ ಕಠಿಣ ಕ್ರಮ ಅನಿವಾರ್ಯ ಎಂದು ಹೇಳಿದರು.
ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಾರಾಂತ್ಯದ ಕಫ್ರ್ಯೂ ಮತ್ತು ಅಂಗಡಿಗಳನ್ನು ತೆರೆಯುವ ಬಗ್ಗೆ ಸರ್ಕಾರದ ಪ್ರಸ್ತಾಪವನ್ನು ಲೆಫ್ಟಿನೆಂಟ್ ಗವರ್ನರ್ ತಿರಸ್ಕರಿಸಿದರು. ನಾವು ಸಾಧ್ಯವಾದಷ್ಟು ಬೇಗ ಈ ನಿರ್ಬಂಧಗಳನ್ನು ತೆಗೆದುಹಾಕುತ್ತೇವೆ ಎಂದು ಕೇಜ್ರಿವಾಲ್ ಹೇಳಿದರು.

Articles You Might Like

Share This Article