ನವದೆಹಲಿ,ಜ.14- ಇಂದು ದೆಹಲಿಯಲ್ಲಿ 25 ಸಾವಿರಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳನ್ನು ದಾಖಲಿಸುವ ನಿರೀಕ್ಷೆ ಇದೆ. 13 ಸಾವಿರಕ್ಕೂ ಅಧಿಕ (ಶೇ.88) ಆಸ್ಪತ್ರೆ ಹಾಸಿಗೆಗಳು ಖಾಲಿ ಇವೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
ದೆಹಲಿಯಲ್ಲಿ ಕೋವಿಡ್-19ರಿಂದ ಮೃತಪಟ್ಟ ಶೇ.75ರಷ್ಟು ಜನರು ಲಸಿಕೆ ಪಡೆದಿರಲಿಲ್ಲ ಎಂದು ಅವರು ಹೇಳಿದ್ದಾರೆ. ನಗರದಲ್ಲಿ ನಿನ್ನೆ 28,867 ಕೋವಿಡ್ ಪ್ರಕರಣಗಳು ವರದಿಯಾಗಿತ್ತು. ಇದು ಕೋವಿಡ್ ಸಾಂಕ್ರಾಮಿಕ ಆರಂಭವಾದಾಗಿನಿಂದ ಅತ್ಯಕ ದೈನಿಕ ಏರಿಕೆಯಾಗಿದೆ.
ನಿನ್ನೆ ಇಲ್ಲಿ 31 ಮಂದಿ ಸಾವಿಗೀಡಾದರು. ಪಾಸಿಟಿವಿಟಿ ದರವು 29.21 ಪ್ರತಿಶತಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಂಕಿ-ಅಂಶಗಳು ತಿಳಿಸಿವೆ. ಕಳೆದ ವರ್ಷ ಏಪ್ರಿಲ್ 20ರಂದು ದೆಹಲಿಯಲ್ಲಿ 28,395 ದೈನಿಕ ಪ್ರಕರಣಗಳ ಏರಿಕೆ ಕಂಡು ಬಂದಿತ್ತು.
