ನವದೆಹಲಿ, ಆ.11- ಕರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಾರ್ವಜನಿಕರು ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಇಡೀ ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏರಿಳಿತ ಕಾಣುತ್ತಿದ್ದು, ದೆಹಲಿಯಲ್ಲಿ ಮಾತ್ರ ಅದರ ಸಂಖ್ಯೆ ಮಿತಿಮೀರುತ್ತಿದೆ. ಸಾವಿರ ಸಂಖ್ಯೆಗೂ ಹೆಚ್ಚುತ್ತಿರುವ ಕಾರಣ ತುರ್ತು ಕ್ರಮಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು, ಮನೆಯಿಂದ ಹೊರ ಬರಬೇಕಾದರೆ ಜನರು ಮಾಸ್ಕ್ ಧರಿಸುವುದನ್ನು ಮತ್ತೆ ಕಡ್ಡಾಯಗೊಳಿಸಲಾಗುತ್ತಿದೆ.
ಪೊಲೀಸರು ಈಗಾಗಲೇ ಸಾರ್ವಜನಿಕರಿಗೆ ಅರಿವು ಮೂಡಿಸುವಂತಹ ಅಭಿಯಾನವನ್ನು ಆರಂಭಿಸಿದ್ದಾರೆ. ಆದರೆ ಯಾವುದೇ ದಂಡವನ್ನು ವಿಧಿಸುತ್ತಿಲ್ಲ. ಮುಂದೆ ಬರುವಂತಹ ಗಣೇಶ ಚತುರ್ಥಿ, ದುರ್ಗಾಪೂಜೆ ಸೇರಿದಂತೆ ಹಲವು ಸಂದರ್ಭದಲ್ಲಿ ಸಾರ್ವಜನಿಕ ಆಚರಣೆಗಳು ಹೆಚ್ಚುವ ಕಾರಣ ಕರೋನಾ ಸೋಂಕು ಏರುವ ಸಾಧ್ಯತೆಯೂ ಕೂಡ ಇರುತ್ತದೆ. ಹೀಗಾಗಿ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗುತ್ತದೆ.
ನಿಯಮ ಮೀರಿದರೆ ಮುಂದಿನ ದಿನಗಳಲ್ಲಿ 500 ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ. ಆದರೆ ನಾಲ್ಕು ಚಕ್ರ ವಾಹನ ಪ್ರಯಾಣಿಕರಿಗೆ ಇದು ಅನ್ವಯಿಸಲಾಗುವುದಿಲ್ಲ ಎಂದು ಕೂಡ ತಿಳಿಸಲಾಗಿದೆ.
ಕೋವಿಡ್‍ನಿಂದ ಬಳಲುತ್ತಿರುವವರ ಸಂಖ್ಯೆ ಕಳೆದ 150 ದಿನಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಬುಧವಾರ ದಾಖಲಾಗಿದ್ದು, 2146 ಹೊಸ ಸೋಂಕಿತರು ಹಾಗೂ ಎಂಟು ಜನರು ಸಾವು ಸಂಭವಿಸಿದೆ. ಪಾಸಿಟಿವಿಟಿ ರೇಟ್ ಶೇ. 17.83ಕ್ಕೆ ಏರಿಕೆಯಾಗಿದೆ.