ಅಗ್ನಿಪತ್ ಯೋಜನೆಗೆ ನ್ಯಾಯಾಲಯದ ಬೆಂಬಲ : ಆಕ್ಷೇಪಣಾ ಅರ್ಜಿಗಳು ವಜಾ

Social Share

ನವದೆಹಲಿ,ಫೆ.27- ಸೇನೆಯ ನೇಮಕಾತಿಯಲ್ಲಿ ಕಳೆದ ವರ್ಷ ಜಾರಿಗೊಳಿಸಲಾಗಿದ್ದ ಹೊಸ ಯೋಜನೆ ಅಗ್ನಿಪತ್ ಅನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಗುಚ್ಚವನ್ನು ದೆಹಲಿ ಹೈಕೋರ್ಟ್ ಇಂದು ವಜಾಗೊಳಿಸಿದೆ.

ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆ ಮತ್ತು ಸಶಸ್ತ್ರ ಪಡೆಗಳನ್ನು ಸುಸಜ್ಜಿತಗೊಳಿಸಲು ಅಗ್ನಿಪತ್ ಪೂರಕವಾಗಿದೆ ಎಂದು ದೆಹಲಿ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠ ಅಭಿಪ್ರಾಯಪಟ್ಟಿದ್ದು, ಯೋಜನೆಯಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣವಿಲ್ಲ ಎಂದು ಹೇಳಿ ತರಕಾರು ಅರ್ಜಿಗಳನ್ನು ವಜಾಗೊಳಿಸಿದೆ.

ಕನ್ನಡಿಗನ ಸಂಶೋಧನೆ: ಮಕ್ಕಳಿಗೆ ಪಾಠ ಮಾಡಲಿದೆ ‘ಶಿಕ್ಷಾ’ ರೋಬೋಟ್

2022ರ ಜೂನ್ 14 ರಂದು ಜಾರಿಗೊಳಿಸಲಾದ ಅಗ್ನಿಪಥ್ ಯೋಜನೆಗೆ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ ಸೇರಿ ಹಲವು ಕಡೆ ಭಾರಿ ಪ್ರತಿಭಟನೆಗಳಾಗಿದ್ದವು. ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆದು ಜೀವ ಹಾನಿಯೂ ಆಗಿತ್ತು.

ಅಗ್ನಿಪತ್ ಯೋಜನೆಯಲ್ಲಿ ಹದಿನೇಳುವರೆ ವರ್ಷದಿಂದ 21 ವರ್ಷ ವಯಸ್ಸಿನವರು ಸೇನೆಗೆ ಸೇರಲು ಅರ್ಹರಾಗಿದ್ದು, ನಾಲ್ಕು ವರ್ಷಗಳ ಸೇವಾವ ನಿಗದಿ ಮಾಡಲಾಗಿತ್ತು. ನಿವೃತ್ತಿಯ ವೇಳೆಗೆ ಅಗ್ನಿವೀರರು ಸುಮಾರು 21 ಲಕ್ಷ ರೂಪಾಯಿಗೂ ಹೆಚ್ಚಿನ ಮೊತ್ತವನ್ನು ಪಡೆಯಲಿದ್ದಾರೆ ಎಂಬ ನಿಯಮಗಳಿವೆ. ದಕ್ಷ ಸೇವೆ ಸಲ್ಲಿಸಿದ ಶೇ.25ರಷ್ಟು ಅಗ್ನಿವೀರರನ್ನು ಸೇನೆಯ ಪೂರ್ಣಾವಧಿಯಲ್ಲಿ ಸೇವೆಯಲ್ಲಿ ಮುಂದುವರಸಲು ಅವಕಾಶ ಇದೆ.

ಪ್ರತಿಭಟನೆಗಳು ವ್ಯಾಪಕವಾದ ಹಿನ್ನೆಲೆಯಲ್ಲಿ ಸೇನೆಗೆ ಸೇರುವ ಗರಿಷ್ಠ ವಯೋಮಿತಿಯನ್ನು 21ರಿಂದ 23 ವರ್ಷಗಳಿಗೆ ಹೆಚ್ಚಿಸಸಲಾಗಿತ್ತು. ಬಳಿಕ ಸಶಸ್ತ್ರ ಪಡೆಗಳಾದ ಸೇನೆ, ವಾಯುಪಡೆ, ನೌಕಾದಳಗಳಿಗೆ ಅಗ್ನಿವೀರರ ನೇಮಕಾತಿ ರ್ಯಾಲಿಗಳು ವ್ಯಾಪಕವಾಗಿ ನಡೆದಿವೆ. ಯುವ ಸಮುದಾಯದಿಂದ ಸೇನೆ ಸೇರ್ಪಡೆಗೆ ಎಂದಿನಂತೆ ಉತ್ಸಾಹ ಕಂಡು ಬಂದಿದೆ.

ಸುಟ್ಟು ಕರಕಲಾದವರು ಗೋ ಭಕ್ಷಕರು ಎಂದು ದೃಡ

ಈ ನಡುವೆ ಅಗ್ನಿವೀರರಿಗೆ ಉದ್ಯೋಗ ಭದ್ರತೆ ಇಲ್ಲ, ದೇಶದ ರಕ್ಷಣಾ ವ್ಯವಸ್ಥೆಯ ಮೇಲೆ ಹೊಸ ಪದ್ಧತಿ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಆಕ್ಷೇಪಿಸಿ ಬಹಳಷ್ಟು ಮಂದಿ ಅಗ್ನಿಪತ್ ಯೋಜನೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಎಲ್ಲಾ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಿದೆ. ಕಳೆದ ವರ್ಷ ಡಿಸೆಂಬರ್ 15 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಇಂದು ತೀರ್ಪು ಪ್ರಕಟಿಸಲಾಗಿದ್ದು, ಅಗ್ನಿಪತ್ ಯೋಜನೆಗೆ ನ್ಯಾಯಾಲಯ ಬೆಂಬಲ ವ್ಯಕ್ತ ಪಡಿಸಿದೆ. ಈ ಮೂಲಕ ಕೇಂದ್ರ ಸಸರ್ಕಾರದ ಮತ್ತೊಂದು ಯೋಜನೆಗೆ ನ್ಯಾಯಾಲಯದ ಬೆಂಬಲ ಸಿಕ್ಕಿದೆ.

Delhi, High Court, dismisses, petitions, challenging, Agnipath, scheme,

Articles You Might Like

Share This Article