ನವದೆಹಲಿ,ಫೆ.3 – ಅಮ್ ಆದ್ಮಿಯ ದೆಹಲಿ ಸರ್ಕಾರದ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರ ಅಮೇರಿಕಾ ಪ್ರವಾಸಕಕ್ಕೆ ಲೆ.ಗವರ್ನರ್ ವಿ.ಕೆ.ಸಕ್ಸೇನಾ ತಾದ್ವಿಕ ಅನುಮೋದನೆ ನೀಡಿದ್ದು, ಪ್ರವಾಸದ ಖರ್ಚು-ವೆಚ್ಚವನ್ನು ಯಾರೂ ಭರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಅಮೇರಿಕಾದ ಟೆಸೋಲ್‍ನಲ್ಲಿ ನಡೆಯುವ ಶೈಕ್ಷಣಿಕ ಸಮಾವೇಶದಲ್ಲಿ ಅಕಾರಿಗಳ ನಿಯೋಗದೊಂದಿಗೆ ಭಾಗವಹಿಸಲು ಸಿಸೋಡಿಯಾ ಅವರಿಗೆ ಅನುಮತಿ ನೀಡುವಂತೆ ದೆಹಲಿ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ವಿ.ಕೆ ಸಕ್ಸೇನಾ ಅನುಮತಿ ನೀಡಿದ್ದಾರೆ. ಆದರೆ ಪ್ರಸ್ತಾವನೆಯಲ್ಲಿ ಪ್ರವಾಸದ ವೆಚ್ಚವನ್ನು ಮನೀಷ್ ಸಿಸೋಡಿಯ ಮತ್ತುಟೆಸೋಲ್ ಸಂಸ್ಥೆ ಭರಿಸಲಿದೆ ಎಂದು ನಮೋದಿಸಲಾಗಿದೆ ಎಂದು ತಿಳಿಸಲಾಗಿದೆ.
ಉತ್ತರ ದಕ್ಷಿಣದಿಂದ ಕಾಂಗ್ರೆಸ್ ಪ್ರತ್ಯೇಕ ಪ್ರಜಾಧ್ವನಿ ಕಹಳೆ
ಅದೇ ವೇಳೆ ದೆಹಲಿಯ ಸಾಮಾನ್ಯ ಆಡಳಿತ ಇಲಾಖೆ ಪ್ರವಾಸ ವೆಚ್ಚವನ್ನು ನಿರ್ವಹಣೆ ಮಾಡಲಿದೆ ಎಂದು ಉಲ್ಲೇಖಿಸಲಾಗಿದೆ.
ಒಂದೆಡೆ ಪ್ರವಾಸದಿಂದಾಗಿ ಸರ್ಕಾರಕ್ಕೆ ಯಾವುದೇ ವೆಚ್ಚ ತಗುಲುವುದಿಲ್ಲ ಎಂದು ಹೇಳುತ್ತಲೇ, ಪ್ರವಾಸ ನಿರ್ವಹಣೆಯ ಭಾದ್ಯತೆಯನ್ನು ಪ್ರದರ್ಶನ ಮಾಡಿ ಗೊಂದಲ ಮೂಡಿಸಲಾಗಿದೆ. ಹೀಗಾಗಿ ಸಕ್ಸೇನಾ ಅವರು, ವೆಚ್ಚ ಯಾರು ಭರಿಸುತ್ತಾರೆ ಎಂಬ ಬಗ್ಗೆ ಸ್ಪಷ್ಟತೆಯ ನೀಡುವಂತೆ ಕಿರುಟಿಪ್ಪಣಿಯನ್ನು ಲಗತಿಸಿ ಅನುಮತಿ ನೀಡಿದ್ದಾರೆ.
Delhi, L-G, approves, Deputy, Chief Minister, Sisodia, US visit,