ಸ್ನೇಹಿತನ ಕತ್ತು ಸೀಳಿ ಕೊಂದು ಶವ ಸುಟ್ಟಿದ್ದ ಕೊಲೆಗಾರನ ಬಂಧನ

Social Share

ನವದೆಹಲಿ,ಜ.8-ಪೇಪರ್ ಕಟರ್‍ನಿಂದ ತನ್ನ ಸ್ನೇಹಿತನ ಕತ್ತು ಸೀಳಿ ಕೊಲೆ ಮಾಡಿ ಶವವನ್ನು ಸುಟ್ಟು ಹಾಕಿದ್ದ 27 ವರ್ಷದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿಯ ವಜೀರಾಬಾದ್ ನಿವಾಸಿ ಮುನಿಶ್ಧಿನ್ ಬಂಧಿತ ಆರೋಪಿಯಾಗಿದ್ದಾನೆ.

ಈತ ತನ್ನ ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಹೀಗಾಗಿ ಪೇಪರ್ ಕಟರ್‍ನಿಂದ ತನ್ನ ಸ್ನೇಹಿತನನ್ನು ಕೊಂದು ಆತನ ಶವವನ್ನು ಸುಟ್ಟು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಜೀರಾಬಾದ್‍ನ ರಾಮ್‍ಘಾಟ್ ಬಳಿ ಪತ್ತೆಯಾದ ಸುಟ್ಟ ಶವದ ಬಗ್ಗೆ ತನಿಖೆ ಆರಂಭಿಸಿದ್ದ ಪೊಲೀಸರು ಕೊಲೆಗಾರನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆಯಾಗಿದ್ದ ರಶೀದ್ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆತನ ಜತೆಗಿದ್ದ ವ್ಯಕ್ತಿಯೊಬ್ಬನ ಬಗ್ಗೆ ಅನುಮಾನ ಕಾಡಲಾರಂಭಿಸಿತು. ಕೂಲಂಕುಷವಾಗಿ ತನಿಖೆ ಕೈಗೊಂಡಾಗ ಪ್ಲಂಬರ್ ಮತ್ತು ಎಲೆಕ್ಟ್ರಿಷಿಯನ್ ಆಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಇಬ್ಬರೂ ಆತ್ಮೀಯರಾಗಿದ್ದರು. ಇದಾದ ನಂತರ ಅವರು ಮನೆಗಳಿಗೆ ಭೇಟಿ ನೀಡುತ್ತಿದ್ದರು.

ವಿಶ್ವಸಂಸ್ಥೆ 2023ನ್ನು ಅಂತಾರಾಷ್ಟ್ರೀಯ ರಾಗಿ ವರ್ಷವೆಂದು ಘೋಷಿಸಿದೆ : ಮೋದಿ

ಈ ವೇಳೆ ರಶೀದ್ ಪತ್ನಿ ಹಾಗೂ ಮುನಿಷದ್ದೀನ್ ನಡುವೆ ಪ್ರೇಮಾಂಕುರವಾಗಿತ್ತು. ರಶೀದ್ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಇದರಿಂದ ರೋಸಿ ಹೋಗಿದ್ದ ಆಕೆ ಮುನಿಷುದ್ದೀನ್ ಜತೆ ಸೇರಿಕೊಂಡು ಪತಿ ಹತ್ಯೆಗೆ ಸಂಚು ರೂಪಿಸಿದ್ದಳು.

ಆಕೆಯ ಸೂಚನೆ ಮೇರೆಗೆ ಮುನಿಷದ್ದೀನ್ ರಶೀದ್‍ನನ್ನು ರಾಮ್‍ಘಾಟ್‍ಗೆ ಕರೆದೊಯ್ದು ಮದ್ಯ ಕುಡಿಸಿ ಕುತ್ತಿಗೆ ಸೀಳಿ ಕೊಲೆ ಮಾಡಿ ಶವ ಸುಟ್ಟು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Delhi, Man, Arrested, Killing, Friend, Paper Cutter,

Articles You Might Like

Share This Article