ದೆಹಲಿ ಪಾಲಿಕೆ ಗದ್ದುಗೆಗೆ ಬಿಜೆಪಿ-ಆಪ್ ನಡುವೆ ಪ್ರಬಲ ಪೈಪೋಟಿ

Social Share

ನವದೆಹಲಿ, ಡಿ.7- ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆಯ ಆರಂಭದಲ್ಲಿ ಬಿಜೆಪಿ ಮತ್ತು ಆಪ್ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಅಧಿಕಾರ ಹಿಡಿಯಲು ಜಿದ್ದಾಜಿದ್ದಿನ ಸರ್ಧೆ ಕಂಡು ಬಂದಿತ್ತು.

ದೇಶದ ರಾಜಧಾನಿ ದೆಹಲಿ ಮಹಾನಗರ ಪಾಲಿಕೆಯಲ್ಲಿನ 250 ಸ್ಥಾನಗಳಿದ್ದು, ಅಧಿಕಾರ ಹಿಡಿಯಲು 126 ಸ್ಥಾನಗಳನ್ನು ಗೆಲ್ಲಬೇಕಿದೆ. ಬೆಳಗ್ಗೆ 8 ಗಂಟೆಯಿಂದ ಆರಂಭವಾದ ಮತ ಎಣಿಕೆಯಲ್ಲಿ ಬಿಜೆಪಿ ಮತ್ತು ಅಮ್ ಆದ್ಮಿ ಪಕ್ಷಗಳು ರೋಚಕ ಪೈಪೋಟಿಯಲ್ಲೇ ಮುಂದುವರೆದವು.

ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಕಳೆದ 15 ವರ್ಷಗಳಿಂದ ಮೂರು ಅವಗೆ ದೆಹಲಿ ಪಾಲಿಕೆಯಲ್ಲಿ ಅಧಿಕಾರ ಹಿಡಿದ್ದು, ನಾಲ್ಕನೇ ಅವಧಿಗೂ ದಿಗ್ವೀಜಯ ಮುಂದುವರೆಸುವ ಹವಣಿಕೆಯಲ್ಲಿತ್ತು. ಬಿಜೆಪಿಯ ಸ್ಥಳೀಯ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಮುಂದಿಟ್ಟುಕೊಂಡು ಮತ ಯಾಚನೆ ಮಾಡಿದ್ದರು.

ಡ್ರಾಮಾ ನೋಡಿದ ವಿದ್ಯಾರ್ಥಿಗಳನ್ನು ಗುಂಡಿಟ್ಟು ಕೊಲ್ಲಿಸಿದ ಕ್ರೂರಿ ಕಿಮ್

ಇತ್ತ ಅಮ್ ಆದ್ಮಿ ಪಕ್ಷ ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಆಧರಿಸಿ ಪ್ರಚಾರ ಮಾಡಿತ್ತು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಅನೇಕರು ಪಾಲಿಕೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ನಡೆಸಿದ್ದರು.

ನವೆಂಬರ್ 4ರಂದು ನಡೆದಿದ್ದ ಚುನಾವಣೆಯಲ್ಲಿ 1349 ಅಭ್ಯರ್ಥಿಗಳು ಕಣದಲ್ಲಿದ್ದರು. ಚುನಾವಣಾ ಆಯೋಗ ಮತ ಎಣಿಕೆಗೆ 42 ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಿದ್ದಲ್ಲದೆ, ಬಿಗಿ ಬಂದೋಬಸ್ತ್ ಆಯೋಜಿಸಿತ್ತು. ಈ ಚುನಾವಣೆಯಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಮತದಾರರ ಗಮನ ಸೆಳೆಯುವ ಯತ್ನ ನಡೆಸಿದ್ದವು.

ಅಮ್‍ಆದ್ಮಿ 138. ಬಿಜೆಪಿ 136, ಕಾಂಗ್ರೆಸ್ 129 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. 2017ದಲ್ಲಿ ನಡೆದಿದ್ದ ಪಾಳಿಕೆ ಚುನಾವಣೆಯಲ್ಲಿ 270 ವಾರ್ಡ್‍ಗಳಿದ್ದವು. ಆ ಚುನಾವಣೆಯಲ್ಲಿ ಬಿಜೆಪಿ 181 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದಿಂದ ಅಧಿಕಾರ ಹಿಡಿದಿತ್ತು. ಅಮ್‍ಆದ್ಮಿಯ 48, ಕಾಂಗ್ರೆಸ್‍ನ 27 ಅಭ್ಯರ್ಥಿಗಳು ಗೆದ್ದಿದ್ದರು.

ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ

ಪಾಲಿಕೆಯ ಪುನಾರಚನೆ ಮತ್ತು ಕ್ಷೇತ್ರ ವಿಂಗಡಣೆಯ ಬಳಿಕ ಕ್ಷೇತ್ರಗಳ ಸಂಖ್ಯೆ 250 ಆಗಿದ್ದು, ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಶೇ.50.48ರಷ್ಟು ಮತದಾನವಾಗಿತ್ತು.

ಬೆಳಗ್ಗೆ 11 ಗಂಟೆಯವರೆಗಿನ ಮತ ಎಣಿಕೆಯಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿ, 92 ಕ್ಷೇತ್ರಗಳಲ್ಲಿ ಮುನ್ನೆಡೆ ಸಾಧಿಸುವ ಮೂಲಕ 103 ಸ್ಥಾನಗಳನ್ನು ಗೆಲ್ಲುವ ಸುಳಿವು ನೀಡಿತ್ತು. ಅಮ್ ಆದ್ಮಿ ಎಂಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ 122 ಕ್ಷೇತ್ರಗಳಲ್ಲಿ ಮುನ್ನೆಡೆಯಲ್ಲಿದ್ದು, 130 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸದಲ್ಲಿತ್ತು.

ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಒಂಬತ್ತು ಕ್ಷೇತ್ರದಲ್ಲಿ ಲೀಡ್ ಕಾಯ್ದುಕೊಂಡು ಹೀನಾಯವಾಗಿ ಮೂರನೇ ಸ್ಥಾನದಲ್ಲಿತ್ತು. ಉಳಿದಂತೆ ಐದು ಪಕ್ಷೇತರ ಅಭ್ಯರ್ಥಿಗಳು ಗೆಲುವಿನತ್ತ ಹೆಜ್ಜೆ ಹಾಕಿದ್ದರು.

ಮೊದಲ ಹಂತದ ಜೆಡಿಎಸ್ ಪಂಚರತ್ನ ರಥಯಾತ್ರೆಗೆ ತೆರೆ

ಚುನಾವಣೋತ್ತರದಲ್ಲಿ ನಡೆದಿದ್ದ ಸಮೀಕ್ಷೆಯ ಪ್ರಕಾರ ಅಮ್‍ಆದ್ಮಿ ಸ್ಪಷ್ಟ ಬಹುಮತದೊಂದಿಗೆ ದೆಹಲಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯುವ ಅಂದಾಜುಗಳಿದ್ದವು. ಆದರೆ ಈವೆರೆಗೂ ಆಡಳಿತ ನಡೆಸಿದ್ದ ಬಿಜೆಪಿ ಪ್ರಬಲ ಪೈಪೋಟಿ ನೀಡಿದೆ. ಒಂದು ವೇಳೆ ಬಿಜೆಪಿ ಹಿನ್ನೆಡೆ ಅನುಭವಿಸಿದರೆ ಅದು ಭಾರೀ ಚರ್ಚೆಗೆ ಗ್ರಾಸವಾಗಲಿದೆ.

#Delhi, #MCDElection, #ElectionResults, #BJPVsAAP, #NeckToNeckFight,

Articles You Might Like

Share This Article