ನವದೆಹಲಿ,ಜ.6- ದೆಹಲಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗಾಗಿ ಇಂದು ನಡೆದ ಪ್ರಥಮ ಸಭೆಯಲ್ಲಿ ಅಮ್ಆದ್ಮಿ ಮತ್ತು ಬಿಜೆಪಿ ಸದಸ್ಯರ ನಡುವೆ ತಳ್ಳಾಟ ನೂಕಾಟ ನಡೆದಿದ್ದು, ಸಭೆಯನ್ನು ಮುಂದೂಡಿಕೆಯಾಗಿದೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅಮ್ಆದ್ಮಿ ಪಕ್ಷ 134 ಸ್ಥಾನಗಳಲ್ಲಿ ಗೆದ್ದು ಬಹುಮತ ಪಡೆದಿದೆ. ಮೇಯರ್ ಆಯ್ಕೆಗೆ ಇಂದು ಚುನಾವಣೆ ನಿಗದಿಯಾಗಿತ್ತು. ಶೇಲ್ಲಿ ಒಬೆರಾಯ್ ಮತ್ತು ಆಶುಥಾಕೂರ್ ಅವರನ್ನು ಮೇಯರ್ ಸ್ಥಾನಕ್ಕೆ ಹೆಸರು ಸೂಚಿಸಲಾಗಿತ್ತು. ರೇಖಾ ಗುಪ್ತಾ ಬಿಜೆಪಿ ಅಭ್ಯರ್ಥಿಯಾಗಿದ್ದರು. ಉಪಮೇಯರ್ ಸ್ಥಾನಕ್ಕೆ ಅಮ್ಆದ್ಮಿ ಪಕ್ಷ ಮೊಹಮ್ಮದ್ ಇಕ್ಬಾಲ್ ಮತ್ತು ಜಲಜ್ ಕುಮಾರ್ರ ಹೆಸರನ್ನು ಸೂಚಿಸಿತ್ತು.
ಗೊರಗುಂಟೆಪಾಳ್ಯ ಎಲಿವೆಟೆಡ್ ಸಮಸ್ಯೆಗೆ ಇನ್ನೂ ಸಿಕ್ಕಿಲ್ಲ ಪರಿಹಾರ
ಮೇಯರ್ ಚುನಾವಣೆಗೂ ಮುನ್ನಾ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆ ನಡೆಯಬೇಕಿತ್ತು. ಬಿಜೆಪಿಯ ಸದಸ್ಯೆ ಸತ್ಯ ಶರ್ಮಾ ಅಧ್ಯಕ್ಷತೆ ವಹಿಸಿ ಪ್ರಕ್ರಿಯೆ ಆರಂಭಿಸಿದರು.
ಮೊದಲಿಗೆ ನಾಮನಿರ್ದೇಶಿತ ಸದಸ್ಯರ ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ಮಾಡಿಕೊಟ್ಟರು. ಇದು ಅಮ್ಆದ್ಮಿ ಪಕ್ಷದ ಸದಸ್ಯರನ್ನು ಕೆರಳಿಸಿತ್ತು. ಘೋಷಣೆ ಕೂಗಲಾರಂಭಿಸಿದರು. ಇದು ಪ್ರಚೋದನೆಗೆ ಕಾರಣವಾಗಿದ್ದು ಬಿಜೆಪಿಯ ಸದಸ್ಯರು ಕೂಡ ಗದ್ದಲ ಆರಂಭಿಸಿದರು. ತಳ್ಳಾಟ ನೂಕಾಟ ಜೋರಾಯಿತು. ಕೆಲ ಸದಸ್ಯರು ಪೀಠಾಧ್ಯಕ್ಷರ ಮುಂದಿ ವೇದಿಕೆ ಏರಿ ಗಲಾಟೆ ಮಾಡಲಾರಂಭಿಸಿದರು.
ಈ ನೂಕಾಟದಲ್ಲಿ ಕೆಲವರು ಕೆಳಗೆ ಬಿದ್ದರು. ಮಹಿಳಾ ಸದಸ್ಯರು ಹೈರಾಣಾದರು. ಇನ್ನೂ ಕೆಲವರು ಕುರ್ಚಿಗಳನ್ನು ಎತ್ತಿಕೊಂಡು ಹಲ್ಲೆ ಮಾಡಲು ಯತ್ನಿಸಿದರು. ಈ ಎಲ್ಲಾ ರಾದ್ಧಾಂತಗಳಿಂದ ಸಭೆಯನ್ನು ಮುಂದೂಡಲಾಗಿದೆ.
Delhi MCD, AAP, BJP members, tables, beat,