ನವದೆಹಲಿ,ನ.26-ದೆಹಲಿಯ ಅಮ್ ಆದ್ಮಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಜೈಲಿನಲ್ಲಿರುವ ನಡೆಸುತ್ತಿರುವ ಕಾರುಬಾರಿನ ಬಗ್ಗೆ ಬಿಜೆಪಿ ಶನಿವಾರ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಸತ್ಯೇಂದ್ರ ಜೈನ್ ಜೊತೆ ತಿಹಾರ್ ಜೈಲಿನ ಅಧೀಕ್ಷಕರು ಬಂದು ಮಾತನಾಡುತ್ತಿರುವುದು ಹಾಗೂ ಇತರರ ಜೊತೆ ಜೈನ್ ಮಿನಿ ಸಭೆಯನ್ನು ನಡೆಸಿರುವುದು ಸ್ಪಷ್ಟವಾಗಿದೆ.
ಸಿಸಿಟಿವಿಯ ದೃಶ್ಯಾವಳಿಗಳು ಸೆಪ್ಟೆಂಬರ್ ತಿಂಗಳಿನ ಕಾಲಮಾನಕ್ಕೆ ಸೇರಿವೆ ಎಂದು ಹೇಳಲಾಗಿದೆ. ಜೈಲಿನಲ್ಲಿ ಸತ್ಯೇಂದ್ರ ಜೈನ್ ಅವರಿಗೆ ಐಷಾರಾಮಿ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಈ ಕಾರಣಕ್ಕಾಗಿ ಜೈಲಿನ ಅೀಧಿಕ್ಷಕ ಅಜಿತ್ಕುಮಾರ್ ಅಮಾನತುಗೊಂಡಿದ್ದಾರೆ ಎಂದು ಹೇಳಲಾಗಿದೆ.
ಬ್ರಿಜಿಲ್ ಶಾಲೆಯಲ್ಲಿ ಗುಂಡಿನ ದಾಳಿ : ಮೂವರ ಹತ್ಯೆ
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದಶಿ ಶೆಹಜಾಜ್ ಜೈನ್ ಟ್ವೀಟ್ ಮಾಡಿದ್ದು, ಜೈಲು ದರ್ಬಾರಿನ ಮತ್ತೊಂದು ಕರ್ಮಕಾಂಡ ಹೊರಬಂದಿದೆ. ಜೈಲು ಅಧಿಕಾರಿ ಅಮಾನತುಗೊಂಡಿದ್ದಾರೆ ಎಂದು ಹೇಳಿದ್ದಾರೆ. ಈವರೆಗೂ ಸತ್ಯೇಂದ್ರ ಜೈನ್ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿ ಜೈಲಿನಲ್ಲಿ ತಮ್ಮ ಕಕ್ಷಿದಾರರಿಗೆ ಸರಿಯಾದ ಆಹಾರ ಪೂರೈಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಜೈಲಿನ ಸಿಸಿಟಿವಿ ದೃಶ್ಯಾವಳಿಗಳು ಒಂದೊಂದಾಗಿ ಹೊರಬರುತ್ತಿವೆ. ಸತ್ಯೇಂದ್ರ ಜೈನ್ ಅವರ ಕೋಣೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಕಾರುಬಾರುಗಳು ದಾಖಲಾಗಿವೆ.
ಮಹಾರಾಷ್ಟ್ರದ 42 ಗ್ರಾಮಗಳನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಲು ನಿರ್ಣಯ
ಜೈಲಿನ ಸಹ ಕೈದಿಗಳನ್ನು ಸತ್ಯೇಂದ್ರ ಜೈನ್ ಅವರ ಕಾಲಿನ ಮಸಾಜ್ ಸೇರಿದಂತೆ ಇತರೆ ಸೇವೆಗಳಿಗೆ ನಿಯೋಜಿಸಲಾಗಿದೆ. ಪುಷ್ಕಳ ಭೋಜನವನ್ನು ಪೂರೈಸಲಾಗುತ್ತಿದೆ.
ಇದು ಸಾಲದು ಎಂಬಂತೆ ತಮ್ಮ ಸಹ ಆರೋಪಿಗಳ ಜೊತೆ ಸತ್ಯೇಂದ್ರ ಜೈನ್ ಹರಟೆ ಹೊಡೆಯುತ್ತಿರುವುದು ಜೈಲಿನ ಅೀಧಿಕ್ಷಕರು ಕೊಠಡಿಗೆ ಬಂದು ಸತ್ಯೇಂದ್ರ ಜೈನ್ ಅವರೊಂದಿಗೆ ಮಾತುಕತೆ ನಡೆಸಿರುವುದು ಸೇರಿದಂತೆ ಹಲವಾರು ವಿಚಾರಗಳು ಬಹಿರಂಗಗೊಂಡಿವೆ.
Delhi, minister, Satyendar ka darbaar, releases, video, Tihar, jail,