ನವದೆಹಲಿ, ಆ. 30- ದೇಶದಲ್ಲಿ ಬಾಲಕಿಯರು, ಯುವತಿಯರು, ಮಹಿಳೆಯರು ಹಾಗೂ ವಯೋವೃದ್ಧೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವಾಗಲೇ ಕೋಲ್ಕತ್ತಾ ದಲ್ಲಿ ಕಳೆದ ವರ್ಷ ಒಂದೇ ಒಂದು ಅತ್ಯಾಚಾರ ಪ್ರಕರಣ ದಾಖಲಾಗದಿರುವುದು ಅಚ್ಚರಿ ಮೂಡಿಸಿದೆ.
ರಾಷ್ಟ್ರೀಯ ಅಪರಾಧ ರೆಕಾರ್ಡ್ ಬ್ಯುರೋ (ಎನ್ಸಿಆರ್ಬಿ) 19 ಮೆಟ್ರೋ ಸಿಟಿಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ 2021ರಲ್ಲಿ ದೇಶದಲ್ಲಿ 31,677 ಅತ್ಯಾಚಾರ ಪ್ರಕರಣಗಳ ದಾಖಲಾಗಿದ್ದು, 31,878 ಮಂದಿ ಆರೋಪಿಗಳ ಮೇಲೆ ಕೇಸ್ ದಾಖಲಾಗಿವೆ ಎಂದು ಸಮೀಕ್ಷೆಯು ತಿಳಿಸಿದೆ.
ನವದೆಹಲಿಯಲ್ಲಿ 1226 ಅತ್ಯಾಚಾರ ಪ್ರಕರಣಗಳು ದಾಖಲಾಗುವ ಮೂಲಕ ಅಗ್ರಸ್ಥಾನ ಪಡೆದಿದ್ದರೆ, ಕೋಲ್ಕತ್ತಾದಲ್ಲಿ 11 ಅಬಲೆಯರು ಅತ್ಯಾಚಾರಕ್ಕೆ ಒಳಗಾಗಿದ್ದರೂ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
ಮಧ್ಯಪ್ರದೇಶದ ಇಂಧೋರ್ನಲ್ಲಿ 165 ಮಂದಿಯ ಮೇಲೆ ಕಾಮುಕರು ಅತ್ಯಾಚಾರ ನಡೆಸಿ ದ್ದರೆ, ಬೆಂಗಳೂರಿನಲ್ಲಿ 117 ಅತ್ಯಾಚಾರ ಪ್ರಕರಣಗಳು, ಹೈದ್ರಾ ಬಾದ್ನಲ್ಲಿ 116, ಮಹಾರಾಷ್ಟ್ರದ ನಾಗ್ಪುರ್ನಲ್ಲಿ 115 ರೇಪ್ ಕೇಸ್ಗಳು ದಾಖಲಾಗಿವೆ ಎಂದು ಎನ್ಸಿಆರ್ಬಿ ಸಮೀಕ್ಷೆಗಳು ತಿಳಿಸಿವೆ.
ಕೊಲ್ಕತ್ತಾದಲ್ಲಿ 2019ರಲ್ಲಿ 14, 2020ರಲ್ಲಿ 11 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೂ ಕೂಡ 2021ರಲ್ಲಿ 11 ಮಂದಿ ಅಬಲೆಯರು ಅತ್ಯಾಚಾರಕ್ಕೆ ಒಳಗಾಗಿದ್ದರೂ ಒಂದೇ ಒಂದು ಕೇಸ್ ದಾಖಲಾಗಿಲ್ಲ ಎಂದು ಎನ್ಸಿಆರ್ಬಿ ಸಮೀಕ್ಷೆಯಲ್ಲಿ ದಾಖಲಿಸಿದೆ.
2020ರಲ್ಲಿ ರಾಜಸ್ಥಾನದಲ್ಲಿ 6337 ಅತ್ಯಾಚಾರಕ್ಕೆ ಸಂಬಂಧ ಪಟ್ಟಂತೆ ದೂರುಗಳು ದಾಖಲಾಗಿ ದ್ದರೆ, ಪಶ್ಚಿಮ ಬಂಗಾಳದ ನಾಗಲ್ಯಾಂಡ್ನಲ್ಲಿ 1123 ರೇಪ್ ಕೇಸ್ಗಳು ದಾಖಲಾಗಿದ್ದವು. ಸಮೀಕ್ಷೆಯ ಪ್ರಕರಣ ನಿರ್ಭಯದಂತಹ ಘೋರ ದುರಂತ ನಡೆದಿರುವ ನವದೆಹಲಿಯಲ್ಲಿ ಅಬಲೆಯರಿಗೆ ಸುರಕ್ಷಿತ ನಾಡಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.