“ಸಾಹಿಲ್ ಮತ್ತು ನಿಕ್ಕಿ ಯಾದವ್ ದಂಪತಿಗಳಾಗಿದ್ದರು”

Social Share

ನವದೆಹಲಿ,ಫೆ.18- ಜೀವನ ಸಂಗಾತಿ ನಿಕ್ಕಿ ಯಾದವ್ ಹತ್ಯೆಗೆ ಸಂಬಂಧಿಸಿದಂತೆ ಆರೋಪಿ ಸಾಹಿಲ್ ಗೆಹ್ಲೋಟ್‍ನ ತಂದೆ, ಆತನ ಇಬ್ಬರು ಸೋದರ ಸಂಬಂಧಿಗಳು ಮತ್ತು ಇಬ್ಬರು ಸ್ನೇಹಿತರು ಸೇರಿದಂತೆ ಒಟ್ಟು ಐವರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ನಿಕ್ಕಿ ಮತ್ತು ಸಾಹಿಲ್ ದಂಪತಿಗಳಾಗಿದ್ದರು ಎಂದು ಬಹಿರಂಗ ಪಡಿಸಿದ್ದಾರೆ.

ಆರೋಪಿ ಸಾಹಿಲ್ ಗೆಹ್ಲೋಟ್‍ನ ತಂದೆ ವೀರೇಂದ್ರ ಸಿಂಗ್, ಇಬ್ಬರು ಸೋದರ ಸಂಬಂಧಿಗಳಾದ ಆಶಿಶ್, ನವೀನ್, ಸ್ನೇಹಿತರಾದ ಅಮರ್ ಮತ್ತು ಲೋಕೇಶ್‍ರನ್ನು ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದು, ಸಾಕ್ಷ್ಯ ನಾಶ ಮತ್ತು ಆರೋಪಿಗೆ ರಕ್ಷಣೆ ನೀಡಿದ ಆರೋಪಕ್ಕಾಗಿ ಬಂಧಿಸಲಾಗಿದೆ.

ಎಲ್ಲರನ್ನೂ ವಿಚಾರಣೆ ನಡೆಸಿ ಹತ್ಯೆಗೆ ಸಂಬಂಧಿಸಿದಂತೆ ಅವರ ಪಾತ್ರವನ್ನು ಪರಿಶೀಲಿಸಿ, ನಂತರ ಬಂಧಿಸಲಾಗಿದೆ. ಬಂಧಿತರ ಪೈಕಿ ಆರೋಪಿಯ ಸಹೋದರ ನವೀನ್ ದೆಹಲಿ ಪೊಲೀಸ್‍ನಲ್ಲಿ ಕಾನ್ಸ್ಟೆಬಲ್ ಆಗಿದ್ದಾನೆ ಎಂದು ವಿಶೇಷ ಪೊಲೀಸ್ ಕಮಿಷನರ್ (ಅಪರಾಧ) ) ರವೀಂದ್ರ ಯಾದವ್ ತಿಳಿಸಿದ್ದಾರೆ.

ಗಡಿಯಲ್ಲಿ ಕಳ್ಳಸಾಗಣಿಕೆ ಯತ್ನ ತಡೆದ ಬಿಎಸ್‍ಎಫ್ ಯೋಧರು

ಈಗಾಗಲೇ ಪೊಲೀಸ್ ವಶದಲ್ಲಿರುವ ಆರೋಪಿ ಸಾಹಿಲ್ ಗೆಹ್ಲೋಟ್‍ನನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಾಗಿದೆ. ನಿಕ್ಕಿ ಯಾದವ್ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದರಿಂದ ಕೊಲೆ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ.

ಪೊಲೀಸರ ಪ್ರಕಾರ ನಿಕ್ಕಿ ಮತ್ತು ಸಾಹಿಲ್ 2020 ರಲ್ಲಿ ನೋಯಿಡಾದ ಆರ್ಯ ಸಮಾಜದ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಆಕೆ ನಿಜವಾಗಿ ಆತನ ಪತ್ನಿಯೇ ಹೊರತು ಲಿವ್-ಇನ್ ಪಾಲುದಾರಳಲ್ಲ ಎಂದು ವಿಶೇಷ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ನಿಕ್ಕಿ-ಸಾಹಿಲ್ ಮದುವೆಯ ಬಗ್ಗೆ ಆರೋಪಿಯ ತಂದೆ ಅಸಮಧಾನಗೊಂಡಿದ್ದರು. ಅದಕ್ಕಾಗಿ ಫೆಬ್ರವರಿ 10 ರಂದು ಬೇರೊಬ್ಬ ಮಹಿಳೆಯೊಂದಿಗೆ ಸಾಹಿಲ್‍ಗೆ ಮದುವೆ ನಿಗದಿ ಪಡಿಸಿದ್ದರು. ಇದನ್ನು ನಿಕ್ಕಿ ತೀವ್ರವಾಗಿ ವಿರೋಧಿಸಿದ್ದಳು.

ಆಕೆಯ ಮನವೋಲಿಸಲು ಸಾಹಿಲ್ ಸಾಕ್ಷಷ್ಟು ಪ್ರಯತ್ನ ಪಟ್ಟಿದ್ದು, ಸಾಧ್ಯವಾಗದಿದ್ದಾಗ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ. ಫೆಬ್ರವರಿ 10ರಂದು ಕೊಲೆ ಮಾಡಿ, ಶವವನ್ನು ಪ್ರೀಜ್ಡ್‍ನಲ್ಲಿಟ್ಟು ತನ್ನ ಮದುವೆಗೆ ತೆರಳಿದ್ದಾನೆ. ಸಹ ಆರೋಪಿಗಳೊಂದಿಗೆ ಕೊಲೆಯ ಮಾಹಿತಿಯನ್ನು ಹಂಚಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಲ್ಲು-ಬಾಣದ ಚಿಹ್ನೆ ಚಿಂತೆ ಬಿಡಿ : ಉದ್ಧವ್‍ಗೆ ಪವಾರ್ ಸಲಹೆ

ಕ್ರಿಮಿನಲ್ ಪಿತೂರಿ, ಸಾಕ್ಷ್ಯ ನಾಶ ಮತ್ತು ಕ್ರಿಮಿನಲ್‍ಗೆ ಆಶ್ರಯ ನೀಡುವುದು ಸೇರಿದಂತೆ ಹಲವು ಆರೋಪಗಳನ್ನು ಆಧರಿಸಿ ಸಹ ಆರೋಪಿಗಳ ವಿರುದ್ಧ ಎಫ್‍ಐರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 14 ರಂದು ಪ್ರೇಮಿಗಳ ದಿನದಂದು ಕೊಲೆ ಬೆಳಕಿಗೆ ಬಂದಿತು. ನಾಲ್ಕು ದಿನಗಳ ನಂತರ, ಆಹಾರ ಪದಾರ್ಥಗಳ ಜೊತೆ ಅಡಗಿಸಿಟ್ಟಿದ್ದ ನಿಕ್ಕಿ ಶವವನ್ನು ವಶ ಪಡಿಸಿಕೊಂಡರು.

Delhi, murder, Sahil, Nikki, temple, wedding,

Articles You Might Like

Share This Article