ವಾಷಿಂಗ್ಟನ್, ಡಿ .17 – ಸುಮಾರು 10 ವರ್ಷಗಳಲ್ಲಿ ಸಾವಿರಾರು ಅಮೆರಿಕನ್ನರು, ಹೆಚ್ಚಾಗಿ ಹಿರಿಯ ನಾಗರಿಕರು, ಲಕ್ಷಾಂತರ ಡಾಲರ್ ವಂಚಿಸಿದ ಟ್ರಾನ್ಸ್-ನ್ಯಾಷನಲ್ ಹಗರಣವನ್ನು ಭೇದಿಸಲು ದೆಹಲಿ ಪೊಲೀಸರು, ಮತ್ತು ಸಿಬಿಐ ಅಮೆರಿಕದ ಎಫ್ಬಿಐಗೆ ಸಹಕಾರ ನೀಡಿದೆ.
ನವದೆಹಲಿಯ ಹರ್ಷದ್ ಮದನ್ (34) ಮತ್ತು ಫರಿದಾಬಾದ್ನ ವಿಕಾಶ್ ಗುಪ್ತಾ (33) ಅವರನ್ನು ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ದೆಹಲಿ ಪೊಲೀಸರು ಬಂಧಿಸಿದ್ದಾರೆ. ನವದೆಹಲಿಯ ಮೂರನೇ ಆರೋಪಿ ಭಾರತೀಯ ಗಗನ್ ಲಂಬಾ, 41, ತಲೆಮರೆಸಿಕೊಂಡಿದ್ದಾನೆ.
ಆತನ ಸೆರೆಗೆ ವ್ಯಾಪಕ ಕಾರ್ಯಾಚರರಣೆ ನಡೆಸಿದ್ದು ಗಗನ್ ಸಹೋದರ ಜತಿನ್ ಲಾಂ¨ ವಶದಲ್ಲಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಂಚನೆ,ಪಿತೂರಿ ಸೇರಿದಂತೆ ಗಮನಾರ್ಹ ನಿಯಮಗಳ ಉಲ್ಲಂಘನೆಗಳ ಆರೋಪದ ಹೊರಿಸಲಾಗಿದೆ.
ಅಮೆರಿಕಾದ ಅಟಾರ್ನಿ ಫಿಲಿಪ್ ಆರ್ ಸೆಲ್ಲಿಂಗರ್ ಅವರು ಟ್ರಾನ್ಸ್-ನ್ಯಾಷನಲ್ ಟೆಕ್ ಸಪೋರ್ಟ್ ಹಗರಣವನ್ನು ಭೇದಿಸುವಲ್ಲಿ ಸಿಬಿಐ ಮತ್ತು ದೆಹಲಿ ಪೊಲೀಸರು ನೀಡಿದ ಸಹಾಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಭಾರತೀಯ-ಅಮೆರಿಕನï, ಮೇಘನಾ ಕುಮಾರ್ ಈಗಾಗಲೆ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ, ಒಂಟಾರಿಯೊದ ಜಯಂತ್ ಭಾಟಿಯಾ (33) ಅವರನ್ನು ಕೆನಡಾ ಅಧಿಕಾರಿಗಳು ಬಂಧಿಸಿದ್ದಾರೆ.
ಸೋಮವಾರದಿಂದ ಅಧಿವೇಶನ, ಆಡಳಿತ-ವಿಪಕ್ಷಗಳ ಕೆಸರೆರಚಾಟಕ್ಕೆ ಅಖಾಡ ಸಜ್ಜು
ನ್ಯೂಯಾರ್ಕ್ನ ರಿಚ್ಮಂಡ್ ಹಿಲ್ನ ಕುಲ್ವಿಂದರ್ ಸಿಂಗ್ (34) ವಿರುದ್ಧ ಹಣ ವರ್ಗಾವಣೆ, ಅಕ್ರಮ ಹಣ ವರ್ಗಾವಣೆ ಮತ್ತು ನಿರ್ದಿಷ್ಟ ಕಾನೂನುಬಾಹಿರ ಚಟುವಟಿಕೆಯಿಂದ ಪಡೆದ ಆಸ್ತಿಯಲ್ಲಿ ವಿತ್ತೀಯ ವಹಿವಾಟು ನಡೆಸಲು ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ.
ಎಲ್ಲಾ ಆರು ಭಾರತೀಯರು ಮತ್ತು ಭಾರತೀಯ ಮೂಲದ ವ್ಯಕ್ತಿಗಳು ಜಾಗತಿಕ ಮಟ್ಟದಲ್ಲಿ ಹೈಟೆಕ್ ಅಕ್ರಮಕ್ಕೆ ವೈಯಕ್ತಿಕ ಕಂಪ್ಯೂಟರ್ಗಳನ್ನು ಬಳಸಿದ್ದಾರೆ ಎಂದು ದೋಷಾರೋಪಣೆಯಲ್ಲಿ ಆರೋಪಿಸಿದೆ. ಕಳೆದ 2012 ರಿಂದ ನವೆಂಬರ್ 2022 ರವರೆಗೆ ಅವರು ಅಮೆರಿಕ , ಭಾರತ ಮತ್ತು ಕೆನಡಾದಲ್ಲಿ ವಂಚನೆ ಜಾಲದಲ್ಲಿ ಭಾಗಿಯಾಗಿದ್ದರೆ ಸುಮಾರು 20,000 ಹಿರಿಯ ನಾಗರಿಕರಿಗೆ 10 ಮಿಲಿಯನ್ ಡಾಲರ್ಗಿಂತಲೂ ಹೆಚ್ಚಿನ ಹಣ ಸುಲಿಗೆ ಮಾಡಿದ್ದಾರೆ.
#CBI, #DelhiPolice, #FBI, #MultimillionDollar, #TechSupportScam, #TranscontinentalRaids,