ಹೊಸ ವರ್ಷದ ಪಾರ್ಟಿ, ದೆಹಲಿಯಲ್ಲಿ ಒಂದೇ ವಾರಕ್ಕೆ 30 ಲಕ್ಷ ಮದ್ಯದ ಬಾಟಲ್ ಸೇಲ್

Social Share

ನವದೆಹಲಿ, ಜ.3-ಒಂದು ವಾರದ ಅವಧಿಯಲ್ಲಿ ನಡೆದ ಪಾರ್ಟಿಗಳಲ್ಲಿ ದೆಹಲಿಯ ಜನರು 218 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಒಂದು ಕೋಟಿ ಮದ್ಯದ ಬಾಟಲಿಗಳನ್ನು ಗುಜರಿ ಹಾಕಿದ್ದಾರೆ. ಹೊಸ ವರ್ಷದ ಮುನ್ನಾದಿನವಾದ ಡಿಸೆಂಬರ್ 31 ರಂದು ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 30 ಲಕ್ಷ ಬಾಟಲ್‍ಗೂ ಹೆಚ್ಚು ಮದ್ಯ ಮಾರಾಟವಾಗಿದೆ ಎಂದು ವರದಿಯಾಗಿದೆ.

ಹೊಸ ವರ್ಷವನ್ನು ಸ್ವಾಗತಿಸುವ ದಿನದಂದು ಜ.1 ರಂದು ನಗರದಲ್ಲಿ 45.28 ಕೋಟಿ ರೂಪಾಯಿ ಮೌಲ್ಯದ ಮದ್ಯ ಸೇವಿಸಲಾಗಿದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಡಿಸೆಂಬರ್ 24-31ರ ಅವಧಿಯಲ್ಲಿ ದೆಹಲಿಯಲ್ಲಿ ದಾಖಲೆಯ 1.10 ಕೋಟಿ ಮದ್ಯದ ಬಾಟಲಿಗಳು ವಿವಿಧ ರೀತಿಯ, ಹೆಚ್ಚಾಗಿ ವಿಸ್ಕಿಗಳು ಮಾರಾಟವಾಗಿವೆ. 218 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಅವರು ಹೇಳಿದರು.

ವೇದಿಕೆ ಬಿಟ್ಟಿಳಿಯದ ನಾಯಕರು, ತಳಮಟ್ಟದಲ್ಲಿ ಸೊರಗುತ್ತಿರುವ ಕಾಂಗ್ರೆಸ್

ಅಧಿಕೃತ ಅಂಕಿಅಂಶಗಳು ಕಳೆದ ಮೂರು ವರ್ಷಗಳಲ್ಲಿ ಅತ್ಯುತ್ತಮ ವಹಿವಾಟಾಗಿದೆ ,ಅಬಕಾರಿ ಇಲಾಖೆ 560 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ. ಪ್ರಸ್ತುತ, 550 ಮದ್ಯ ಮಾರಾಟ ಕೇಂದ್ರಗಳ ಮೂಲಕ ನಗರದಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಇದು ನಗರದಾದ್ಯಂತ 900 ಕ್ಕೂ ಹೆಚ್ಚು ಹೋಟೆಲ್‍ಗಳು, ಪಬ್‍ಗಳು ಮತ್ತು ರೆಸ್ಟೋರೆಂಟ್‍ಗಳಲ್ಲಿನ ಬಾರ್‍ಗಳಲ್ಲಿ ಲಭ್ಯವಿದೆ.

Delhi, record, liquor, sales, New Year,

Articles You Might Like

Share This Article