ಸುಲಿಗೆ ಮಾಡುತ್ತಿದ್ದ ದೆಹಲಿಯ ನಿವೃತ್ತ ಪೊಲೀಸ್ ಪೇದೆ ಅರೆಸ್ಟ್

Social Share

ಹೊಸದಿಲ್ಲಿ, ಸೆ 19- ಹಿರಿಯ ಪೊಲೀಸ್ ಅಧಿಕಾರಿಯಂತೆ ಸೋಗು ಹಾಕಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಇತ್ತೀಚೆಗೆ ನಿವೃತ್ತ ಹೊಂದಿದ್ದ ದೆಹಲಿ ಪೊಲೀಸ್ ಹೆಡ್‍ಕಾನ್ಸ್‍ಟೇಬಲ್‍ನನ್ನು ಬಂಧಿಸಲಾಗಿದೆ
ಸಮಯಪುರ ಬದ್ಲಿ ಸ್ಟೇಷನ್ ಹೌಸ್ ಆಫೀಸರ್ ಎಂದು ಪರಿಚಯಿಸಿಕೊಂಡ ರೋಹಿಣಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಂದ ಹಣ ವಸೂಲಿ ಮಾಡಿದ ಜೈ ಭಗವಾನ್ (60) ಬಂದಿತ ಆರೋಪಿಯಾಗಿದ್ದಾನೆ.

ಈತ ಕಳೆದ ಆಗಸ್ಟ್ 31 ರಂದು ಸೇವೆಯಿಂದ ನಿವೃತ್ತರಾಗಿದ್ದು ಹಲವು ವಿಚಾರಣೆ ಹಂತದ ಪ್ರಕರಣಗಳ ಬಗ್ಗೆ ತಿಳಿದಿದ್ದ ಅದರ ಲಾಭ ಪಡೆದು ಸುಲಿಗೆಗೆ ಇಳಿದಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಣಕಾಸಿನ ವ್ಯಾಜ್ಯ ಕುರಿತು ಕಳೆದ ಶನಿವಾರದಂದು ಮಹಿಳೆಯೊಬ್ಬರು ದಕ್ಷಿಣ ರೋಹಿಣಿ ಪೊಲೀಸ್ ಠಾಣೆ ಬಂದು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ.

ಕೂಡಲೆ ಎಚ್ಚೆತ್ತ ಪೊಲೀಸರು ರೋಹಿಣಿಯ ಸೆಕ್ಟರ್ -2ನ ಆಸ್ಪತ್ರೆಯ ಬಳಿ ವ್ಯಕ್ತಿಯೊಬ್ಬರಿಗೆ ಭೇಟಿಯಾಗುವಂತೆ ಜೈ ಭಗವಾನ್ ಕರೆ ಮಾಡಿದ್ದ ಅದರಂತೆ ಇನ್ಸ್‍ಪೆಕ್ಟರ್ ಸಮವಸ್ತ್ರ ತೊಟ್ಟು ಆತ ಪೋಸು ನೀಡುತ್ತಿದ್ದ. ಯೋಜನೆಯ ಪ್ರಕಾರ ಇಬ್ಬರು ಪೊಲೀಸ್ ಸಿಬ್ಬಂದಿ ಬಂದು ಪರಿಚಯ ಕೇಳಿ ಸಲ್ಯೂಟ್ ಹೊಡೆದಿದ್ದಾರೆ.

ತಡಬಡಾಯಿಸಿದ ಆತ ನಾಟಕವಾಡಿದ್ದಾನೆ ಕೂಡಲೆ ಹೆಚ್ಚಿನ ಸಮಯ ಕಳೆಯದೆ ಆತನನ್ನು ಪೊಲೀಸ್ ಠಾಣೆಗೆ ಕರೆತಮದು ವಿಚಾರಣೆ ನಡೆಸಿದಾಗ ಆತ ದೆಹಲಿ ಪೊಲೀಸ್‍ನ ಸಂವಹನ ಘಟಕದಿಂದ ನಿವೃತ್ತ ಹೆಡ್‍ಕಾನ್ಸ್‍ಟೇಬಲ್ ಎಂದು ಗೊತ್ತಾಗಿತ್ತು.
ಜನರನ್ನು ಸುಲಿಗೆ ಮಾಡುವ ಉದ್ದೇಶದಿಂದ ಗುರುತಿನ ಚೀಟಿಯನ್ನು ನಕಲಿ ಮಾಡಿದ್ದಾನೆ ಆದರೆ ತನ್ನ ಮೊದಲ ಪ್ರಯತ್ನದಲ್ಲಿ ಸಿಕ್ಕಿಬಿದ್ದಿದ್ದಾನೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

Articles You Might Like

Share This Article