ಚಾವ್ಲಾ ಅತ್ಯಾಚಾರ ಪ್ರಕರಣ : ಮೇಲ್ಮನವಿ ಸಲ್ಲಿಸಲು ದೆಹಲಿ ಸರ್ಕಾರ ಸಿದ್ಧತೆ

Social Share

ನವದೆಹಲಿ, ನ.21- ಚಾವ್ಲಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಆರೋಪಿಗಳ ಬಿಡುಗಡೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ದೆಹಲಿ ಸರ್ಕಾರ ಮುಂದಾಗಿದೆ. ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ವಿನೈ ಕುಮಾರ್ ಸಕ್ಸೆನಾ ಅವರು ಸುಪ್ರೀಂಕೋರ್ಟ್ ಆದೇಶವನ್ನು ಪ್ರಶ್ನಿಸುವ ಪ್ರಕ್ರಿಯೆಗೆ ಅನುಮತಿ ನೀಡಿದ್ದಾರೆ.

ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿಯಾಗಿದ್ದ ಉದಯ್ ಕುಮಾರ್ ಲಲಿತ್ ಅವರು ನಿವೃತ್ತರಾಗುವ ಮೊದಲು ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ವಿಭಾಗೀಯ ಪೀಠದಿಂದ ಆದೇಶ ನೀಡಿ, ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿ, ಜೈಲಿನಿಂದ ಬಿಡುಗಡೆ ಮಾಡಲು ಸೂಚಿಸಿದ್ದರು.

ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಘಟನೆ ಪರಿಸ್ಥಿತಿಯ ಸಂಪೂರ್ಣತೆ, ಲಭ್ಯ ಇರುವ ದಾಖಲೆಗಳನ್ನು ಪರಿಗಣಿಸುವುದಾದರೆ ಆರೋಪಿಗಳನ್ನು ತಪ್ಪಿತಸ್ಥರು ಎಂದು ನಿರ್ಧರಿಸುವುದು ಕಷ್ಟ. ಕ್ಲಿನಿಕಲ್ ಸಾಕ್ಷ್ಯಗಳು ಕೂಡ ಆರೋಪಿಗಳನ್ನು ದೋಷಿಗಳೆಂದು ದೃಢಪಡಿಸುವ ತಾರ್ಕಿಕತೆಯನ್ನು ಪ್ರದರ್ಶಿಸಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ. ಆರೋಪಿಗಳನ್ನು ನಿರ್ಧೋಷಿಗಳೆಂದು ಘೋಷಿಸಿದೆ.

ಠಾಕ್ರೆ ಬಣ ಮತ್ತು ಕಾಂಗ್ರೆಸ್ ನಡುವೆ ಮತ್ತೆ ಪ್ಯಾಚಪ್

10 ವರ್ಷಗಳ ಬಳಿಕ ಪ್ರಕರಣದಲ್ಲಿ ಆರೋಪಿಗಳನ್ನು ನಿರ್ದೋಷಿಗಳೆಂದು ಘೋಷಿಸಲಾಗಿದೆ. ಉತ್ತರಾಖಾಂಡ್ ಪೌರಿ ಘರವಾಲ ಜಿಲ್ಲೆಯವರಾದ ಮಹಿಳೆ ದೆಹಲಿಯಲ್ಲಿ ಅಪಹರಣಕ್ಕೆ ಒಳಗಾಗಿದ್ದರು. ಮಾರನೇಯ ದಿನ ಹರ್ಯಾಣದ ರೆವಾರಿ ಜಿಲ್ಲೆಯ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದರು.

ಗುರುಗ್ರಾಮ ಸೈಬರ್ ಸಿಟಿಯ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ದೆಹಲಿಯ ಚವ್ಲಾ ಕ್ಯಾಂಪ್‍ನಲ್ಲಿ ವಾಸವಾಗಿದ್ದರು. ಕೆಲಸ ಮುಗಿಸಿ ಬರುವಾಗ ಬಸ್‍ನಿಂದ ಇಳಿದು 10 ನಿಮಿಷ ನಡಿಗೆಯ ದೂರದ ತಮ್ಮ ಮನೆಯತ್ತ ಇಬ್ಬರು ಸ್ನೇಹಿತರ ಜೊತೆ ನಡೆದು ಹೋಗುತ್ತಿದ್ದರು.

ಈ ವೇಳೆ ವ್ಯಕ್ತಿಯೊಬ್ಬರು ಮಹಿಳೆಯನ್ನು ಅಪಹರಣ ಮಾಡಿದ್ದರು. ಮಾರನೇಯ ದಿನ ಆಕೆಯ ಶವ ಹಲವು ಗಾಯಗಳೊಂದಿಗೆ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಕಾರಿನ ಟೋಲ್ಸ್, ಗ್ಲಾಸ್ ಬಾಟಲ್ ಮತ್ತು ಹರಿತವಾದ ಆಯುಧಗಳಿಂದ ದಾಳಿ ಮಾಡಲಾಗಿದೆ ಎಂದು ನಮೂದಿಸಲಾಗಿತ್ತು.

ಭಾರತ-ಅಮೇರಿಕ ನಡುವೆ ಅತ್ಯುತ್ತಮ ಸಂಬಂಧವಿದೆ : ಶ್ವೇತಭವನದ ಉನ್ನತಾಧಿಕಾರಿ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ, ವಿನೋದ್ ಸೇರಿದಂತೆ ಮೂವರನ್ನು ಬಂಧಿಸಲಾಗಿತ್ತು. 2014ರ ಫೆಬ್ರವರಿ 19ರಂದು ದೆಹಲಿ ಸಿಟಿ ಕೋರ್ಟ್ ಆರೋಪಿಗಳಿಗೆ ಮರಣದಂಡನೆ ವಿಧಿಸಿದೆ. ಅದೇ ವರ್ಷ ಆಗಸ್ಟ್ 26ರಂದು ದೆಹಲಿ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿತ್ತು. ಮಹಿಳೆಯನ್ನು ಅಪಹರಣ ಮಾಡಿರುವುದು ಮತ್ತು ದೇಹವನ್ನು ವಿರೂಪಗೊಳಿಸಿರುವುದನ್ನು ನೋಡಿದರೆ ಆರೋಪಿಗಳು ರಕ್ತದ ವಾಸನೆಗೆ ಹೊಂದಿಕೊಂಡ ತರಬೇತಿ ಪಡೆದವರಾಗಿರಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಮೆರವಣಿಗೆ ಹೋಗುತ್ತಿದ್ದ ಜನರ ಮೇಲೆ ಟ್ರಕ್ ಹರಿದು 12 ಮಂದಿ ಸಾವು

ಆದರೆ ಸುಪ್ರೀಂಕೋರ್ಟ್ ಆರೋಪಿಗಳ ಕೃತ್ಯವನ್ನು ದೃಢಪಡಿಸಲು ಸಾಕ್ಷ್ಯಗಳು ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಶಿಕ್ಷೆಯಿಂದ ಖುಲಾಸೆಗೊಳಿಸಿದೆ. ಈ ತೀರ್ಪಿಗೆ ದೆಹಲಿ ಸರ್ಕಾರ ವಿರೋಧ ವ್ಯಕ್ತ ಪಡಿಸಿದೆ.

ಉತ್ತರಖಾಂಡ್‍ನ ಮುಖ್ಯಮಂತ್ರಿ ಪುಷ್ಕರ್‍ಸಿಂಗ್ ಧಾಮಿ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜ್ಜುರೊಂದಿಗೆ ಮಾತನಾಡಿದ್ದು, ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ನ್ಯಾಯಕೊಡಿಸಲು ನೆರವಾಗುವಂತೆ ಮನವಿ ಮಾಡಿದ್ದಾರೆ.

Delhi, Challenge, Supreme Court, Order, 3 Rape, Murder, Convicts,

Articles You Might Like

Share This Article