ನವದೆಹಲಿ,ಜ.3- ಕಂಜಾವಾಲ ಅಪಘಾತ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದು, ಮೃತಪಟ್ಟ ಯುವತಿಯ ಜೊತೆಗೆ ಆರಂಭದಲ್ಲಿ ಇದ್ದ ಸ್ನೇಹಿತೆ ಅಪಘಾತ ನಡೆದ ತಕ್ಷಣ ಸಣ್ಣಪುಟ್ಟ ಗಾಯಗಳೊಂದಿಗೆ ಸ್ಥಳದಿಂದ ಪರಾರಿಯಾಗಿರುವುದು ಸ್ಪಷ್ಟವಾಗಿದೆ.
ಅಪಘಾತಕ್ಕೆ ಒಳಗಾದ 20 ವರ್ಷದ ಯುವತಿಯ ದೇಹ ಕಾರಿನ ಕೆಳಗೆ ಸಿಲುಕಿದ್ದು, 12 ಕಿಲೋ ಮೀಟರ್ ದೂರ ಎಳೆದುಕೊಂಡು ಹೋಗಿರುವುದು ಪ್ರಕರಣದ ಭೀಕರತೆಯನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರಕರಣದತ್ತ ಹೆಚ್ಚು ಗಮನ ಹರಿಸಿದ್ದಾರೆ. ಆದರೆ ದೆಹಲಿಯ ಪೊಲೀಸರು ಕಳಪೆ ತನಿಕೆ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ ಹೊಸ ವರ್ಷದ ಪಾರ್ಟಿ ಮುಗಿಸಿ ಯುವತಿ ರಾತ್ರಿ 1.45ರ ಸುಮಾರಿಗೆ ಹೊಟೇಲ್ನಿಂದ ಹೊರ ಬಂದಿದ್ದಾಳೆ. ಆಕೆ ಪಿಂಕ್ ಬಣ್ಣದ ಟಿ-ಶರ್ಟ್ ಧರಿಸಿರುವುದು, ಆಕೆಯೊಂದಿಗಿದ್ದ ಸ್ನೇಹಿತಿ ಕೆಂಪು ಬಣ್ಣದ ಟಿ-ಶರ್ಟ್ ಧರಿಸಿರುವುದು ಸ್ಪಷ್ಟವಾಗಿದೆ. ಆರಂಭದಲ್ಲಿ ಸ್ನೇಹಿತೆ ಸ್ಕೂಟರ್ ಅನ್ನು ಚಲಾಯಿಸಿದ್ದಾಳೆ. ಸ್ವಲ್ಪ ದೂರದ ಬಳಿಕ ಅಪಘಾತದಲ್ಲಿ ಮೃತಪಟ್ಟ ಯುವತಿ ಸ್ಕೂಟರ್ ಚಲಾಯಿಸಿದ್ದಾರೆ. ಇಬ್ಬರು ಜೊತೆಯಲ್ಲಿದ್ದಾಗಲೇ ಕಾರು ಢಿಕ್ಕಿ ಹೊಡೆದಿದೆ. ಸ್ನೇಹಿತೆಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಆಕೆ ಸ್ಥಳದಿಂದ ಪರಾರಿಯಾಗಿದ್ದಾಳೆ.
ಆಂಧ್ರ ಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿಷೇಧ
ನತದೃಷ್ಟ ಯುವತಿ ಕಾರಿನಡಿ ಸಿಲುಕಿದ್ದು, ಆಕೆಯ ದೇಹ 12 ಕಿಲೋ ಮೀಟರ್ ದೂರದ ಕಂಜವಾಲ ಬಳಿ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲಿವರೆಗು ಆಕೆ ಕಾರಿನಡಿ ಸಿಲುಕಿರುವುದು, ದಾರಿಯುದ್ದಕ್ಕೂ ದೇಹ ನೆಲಕ್ಕೆ ಉಜ್ಜಿಕೊಂಡೆ ಬಂದಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿದೆ. ಸಾವಿಗೂ ಮುನ್ನಾ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತೆ ಎಂಬ ಬಗ್ಗೆ ಇನ್ನೂ ಮಾಹಿತಿ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಪೊಲೀಸರ ಕೈ ಸೇರಿಲ್ಲ.
ಪ್ರತ್ಯೇಕ್ಷದರ್ಶಿಗಳ ಮಾಹಿತಿ ಆಧರಿಸಿ ಸ್ಥಳೀಯರ ನೆರವಿನಲ್ಲಿ ಪೊಲೀಸರು ಕಾರಿನಲ್ಲಿದ್ದ ಐವರನ್ನು ಬಂಧಿಸಿದ್ದಾರೆ. ಅಪಘಾತ ಮಾಡಿದ ವೇಳೆ ಎಲ್ಲಾ ಆರೋಪಿಗಳು ನಶೆಯಲ್ಲಿದ್ದರು ಎಂದು ಹೇಳಲಾಗಿದೆ. ಆರೋಪಿಗಳ ರಕ್ತದ ಮಾದರಿಯನ್ನು ವೈದ್ಯಕೀಯ ಪರೀಕ್ಷೆ ಕಳುಹಿಸಲಾಗಿದೆ.
ಗಡಿ ರಕ್ಷಣೆಗೆ ಅನುಕೂಲವಾಗುವ ವಿವಿಧ ಯೋಜನೆಗಳ ಲೋಕಾರ್ಪಣೆ
ಆರೋಪಿಗಳನ್ನು ನಿನ್ನೆ ನ್ಯಾಯಾಲಯ ಮೂರು ದಿನಗಳವರೆಗೂ ಪೆಪೊಲೀಸ್ ವಶಕ್ಕೆ ನೀಡಿದೆ. ಇಂದು ಆರೋಪಿಗಳನ್ನು ಸ್ಥಳ ಪರಿಶೀಲನೆಗೆ ಕರೆ ತಂದು ಪ್ರಕರಣದ ಮರುಸೃಷ್ಟಿಸುವ ಸಾಧ್ಯತೆಯಿದೆ. ಘಟನೆಯ ಕುರಿತು ಸಮಗ್ರ ವರದಿ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ದೆಹಲಿ ಪೊಲೀಸ್ ಆಯುಕ್ತರು ತನಿಖೆಗಾಗಿ ವಿಶೇಷ ಪೊಲೀಸ್ ಆಯುಕ್ತೆ ಶಾಲಿನಿ ಸಿಂಗ್ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದಾರೆ.
#Delhi, #woman, #dies, #being #dragged, #car, #probe #underway,