ಬೆಂಗಳೂರು,ಮಾ.17- ರಾಜ್ಯಸರ್ಕಾರಿ ನೌಕರರು, ನಿವೃತ್ತಿ ನೌಕರರು ಹಾಗೂ ಕುಟುಂಬ ಪಿಂಚಣಿದಾರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ 7ನೇ ರಾಜ್ಯ ವೇತನ ಆಯೋಗ ನೀಡಿರುವ ವರದಿಯ ಶಿಫಾರಸ್ಸುಗಳನ್ನು 2023 ರ ಏಪ್ರಿಲ್ 1 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಬೇಕೆಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ರಾಜ್ಯಸರ್ಕಾರವನ್ನು ಒತ್ತಾಯಿಸಿದೆ.
7 ನೇ ವೇತನ ಆಯೋಗವು ನಿನ್ನೆ ತನ್ನ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ. ಇದಕ್ಕಾಗಿ ಆಯೋಗ ಅಧ್ಯಕ್ಷರಾಗಿದ್ದ ಸುಧಾಕರ್ ಅವರನ್ನು ಹಾಗೂ ವರದಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸಂಘದ ಅಧ್ಯಕ್ಷ ಡಾ.ಎಲ್.ಭೈರಪ್ಪ ತಿಳಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ, ನಿವೃತ್ತಿ ನೌಕರರಿಗೆ, ಕುಟುಂಬ ಪಿಂಚಣಿದಾರರಿಗೆ ವೇತನ, ಭತ್ಯೆಗಳನ್ನು, ನಿವೃತ್ತ ವೇತನ ಹಾಗೂ ಪಿಂಚಣಿಯನ್ನು ಆಯೋಗದ ಶಿಫಾರಸ್ಸಿನಂತೆ ಪರಿಷ್ಕರಿಸಲು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.