ದೊಡ್ಡವರನ್ನು ಬಿಟ್ಟು ಬಡವರ ಮೇಲೆ ಬಿಬಿಎಂಪಿ ಪೌರುಷ ಪ್ರದರ್ಶನ

Social Share

ಬೆಂಗಳೂರು,ಅ.10- ಒತ್ತುವರಿ ವಿಚಾರದಲ್ಲಿ ಬಿಬಿಎಂಪಿಯವರ ಡಬಲ್ ಸ್ಟಾಂಡರ್ಡ್ ಮತ್ತೊಮ್ಮೆ ಬಟಬಯಲಾಗಿದೆ. ದಸರಾ ಮುಗಿದ ಬೆನ್ನಲ್ಲೆ ಬೃಹತ್ ಒತ್ತುವರಿ ತೆರವು ಕಾರ್ಯಚರಣೆ ನಡೆಸುವುದಾಗಿ ಘರ್ಜಿಸಿದ್ದ ಬಿಬಿಎಂಪಿ ಅಧಿಕಾರಿಗಳು ಇದೀಗ ದೊಡ್ಡವರನ್ನು ಬಿಟ್ಟು ಸಣ್ಣಪುಟ್ಟ ಒತ್ತುವರಿದಾರರ ಮೇಲೆ ತನ್ನ ದರ್ಪ ಮುಂದುವರೆಸಿದೆ.

ಬಿಬಿಎಂಪಿ ತೆರವು ಪಟ್ಟಿಯಲ್ಲಿದ್ದಂತೆ ಇಂದು 10 ಕ್ಕೂ ಹೆಚ್ಚು ಕಡೆ ಡೆಮಾಲಿಷನ್ ಮಾಡಬೇಕಿತ್ತು ಆದರೆ, ಏಕಾಏಕಿ ಡೆಮಾಲಿಷನ್ ಸ್ಥಳ ಕಡಿಮೆ ಮಾಡಲಾಗಿದೆ.

ದೊಡ್ಡವರ ಕಟ್ಟಡಗಳೇ ನಾಪತ್ತೆ: ಇಂದು ಕೇವಲ ನಾಲ್ಕು ಕಡೆ ಮಾತ್ರ ಡೆಮಾಲಿಷನ್ ಕಾರ್ಯ ನಡೆಸಲು ಬಿಬಿಎಂಪಿ ಮುಂದಾಗಿದ್ದು, ವೈಟ್ ಫೀಲ್ಡï ಹಾಗೂ ಆರ್ ನಾರಾಯಣ ಪುರದ 5 ಕಟ್ಟಡಗಳು, ಕಸವನಹಳ್ಳಿಯ ಮೂರು ಕಡೆ ಶೆಡ್ ತೆರವು, ಬೆಳ್ಳಂದೂರಿನಲ್ಲಿ 4 ಕಡೆ ಶೆಡ್ ಹಾಗೂ ಕಾಂಪೌಂಡ್ ತೆರವು ಕಾರ್ಯಚರಣೆ ನಡೆಸಲಿದೆ.

ಆದರೆ, ಇದೇ ಪ್ರದೇಶಗಳಲ್ಲಿ ಒತ್ತುವರಿ ಮಾಡಿಕೊಂಡಿದ್ದವರ ದೊಡ್ಡ ದೊಡ್ಡವರ ಕಟ್ಟಡಗಳ ಹೆಸರುಗಳು ಪಟ್ಟಿಯಿಂದ ನಾಪತ್ತೆಯಾಗಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಒತ್ತುವರಿದಾರರ ಪಟ್ಟಿಯಲ್ಲಿದ್ದ ದೊಡ್ಡ ದೊಡ್ಡವರ ಹೆಸರು ಕೈ ಬಿಡುವ ಮೂಲಕ ಒತ್ತುವರಿದಾರರು ಮತ್ತೆ ನ್ಯಾಯಾಲಯ ಕದ ತಟ್ಟಲು ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೇ ಅನುವು ಮಾಡಿಕೊಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಹಾಗಾದ್ರೆ ಎಲ್ಲಾಲ್ಲಿ ಒತ್ತುವರಿ ಬಾಕಿ ಇದೆ:
ಕೆ.ಆರ್.ಪುರಂ ಸರ್ವೇ ನಂಬರ್‍ಗಳು
ಶಾಂತಮ್ಮನಹಳ್ಳಿ : 31/1ಅ 34 33
ದೇವಸಂದ್ರ : 06 13/4 (ಎಸ್.ಆರ್ ಲೇಔಟï)
ವಿಜಿನಾಪುರ : 90 76 88
ಮೇಡಳ್ಳಿ : 69 98 72
ನಾಗೇನಹಳ್ಳಿ : 19
ಕಲ್ಕೆರೆ : 263 264 345
ದೇವಸಂಧ್ರ : 47 43 41 (ಭೀಮಯ್ಯ ಲೇಔಟï)
ವಿಭೂತಿಪುರ : 178 191
ಕೋಡೇನಹಳ್ಳಿ : 68 69 95 96 119
ಹೊರಮಾವು : 30 31 57 58 91 92 96 97
ಮಹದೇವಪುರ ವಲಯ
ವೈಟ್ ಫೀಲ್ಡï : 16 17 18 38
ಕಸವನಹಳ್ಳಿ : 73 74 75
ಬೆಳ್ಳಂದೂರು : 13 14 18/1
ಹೂಡಿ : 71 72 (ದಿವ್ಯಾ ಶಾಲೆ ಹತ್ತಿರ)
ದೊಡ್ಡನಕ್ಕುಂದಿ : 24/1 24/4 24/5 24/6 (ಫೆರ್ನ್ ಸಿಟಿ)
ದೊಡ್ಡನಕ್ಕುಂದಿ : 172 174 178 181 182 184 185 186 187 (ಗುರುರಾಜ ಲೇಔಟï)
ಹೂಡಿ : 166 181 (ಬಸವಣ್ಣನಗರ)
ಮಹದೇವಪುರ : 35 (ಪೂರ್ವ ಪಾರ್ಕ್ ರಿq್ಜï)
ಚಿನ್ನಪ್ಪನಹಳ್ಳಿ : 42 43
ಮುನ್ನೇಕೊಳಲು : 34 35 (ಮುನ್ನೇಕೊಳಲು ಕೆರೆ ಹತ್ತಿರ)
ಮುನ್ನೇಕೊಳಲು : 87 (ಮಾರತ್ ಹಳ್ಳಿ ಓಆರ್‍ಆರ್)

Articles You Might Like

Share This Article