32 ಅಂತಸ್ತಿನ ಕಟ್ಟಡ ನೆಲಸಮ, ಮನೆಗಳಿಗೆ ಮರಳಿದ 100 ಕುಟುಂಬಗಳು

Social Share

ನೊಯ್ಡಾ. ಆ.29- ಕೆಡವಲಾದ ಅವಳಿ ಗೋಪುರ ಬಳಿಯಿರುವ ವಸತಿ ಕಟ್ಟಡಗಳಿಂದ ತೆರವುಗೊಂಡ ಸುಮಾರು 100 ಕುಟುಂಬಗಳು ತಮ್ಮ ಮನೆಗಳಿಗೆ ಮರಳಿದ್ದಾರೆ. 32 ಅಂತಸ್ತಿನ ಅವಳಿ ಗೋಪುರಗಳನ್ನು ಕೆಡವುವ ಮೊದಲು ಎಮರಾಲ್ಡ ಕೋರ್ಟ್ ಮತ್ತು ಎಟಿಎಸ್ ವಿಲೇಜ್ ಸೊಸೈಟಿಯಿಂದ 5,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಯಿತು.

ನಿನ್ನೆ ರಾತ್ರಿಯೇ ಮರಳಿದ ಜನರು ತಮ್ಮ ಮನೆಗಳು ಸುರಕ್ಷಿತವಾಗಿವೆ ಎಂದು ನಿರಾಳರಾಗಿದ್ದಾರೆ.ಪಕ್ಕದಲ್ಲೇ ಇದ್ದ
ಬ್ಲೂಸ್ಟೋನ್ ಆಪಾರ್ಟ್‍ಮೆಂಟ್ ನಿವಾಸಿ ಆರತಿ ಕೊಪ್ಪುಳ ಮಾತನಾಡಿ, ಸೂಪರ್ಟೆಕ್ ಸೊಸೈಟಿಯ ನಾಲ್ಕು ಕಟ್ಟಡಗಳಗೆ ಇನ್ನೂ ಅನಿಲ ಪೂರೈಕೆ ಸಂಪರ್ಕ ನೀಡಿಲ್ಲಸಮಾಧಾನ ಸಂಗತಿ ಎಂದರೆ ನಮ್ಮ ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ.

ಆದರೆ ನೆಲಮಾಳಿಗೆಯಲ್ಲಿ ದೂಳಿನ ವಾಸನೆ ಇದೆ ಎಂದು ಹೇಳಿದ್ದಾರೆ.ಸಣ್ಣ ಪುಟ್ಟ ಸಮಸ್ಯಗಳು ನಾಳೆಯೊಳಗೆ ಸರಿಹೋಗಲಿದೆ ಎಂದರು ಕುಸಿದ ಕಟ್ಟಡದ ಸುತ್ತಮುತ್ತ ಪೊಲೀಸರು ಬ್ಯಾರಿಕೇಡ್ ಹಾಕಲಾಗಿದೆ, ಜನರಿಗೆ ಸುರಕ್ಷಿತವಾಗಿ ತೆರಳಲು ವ್ಯವಸ್ಥೆ ಮಾಡಲಾಗಿದೆ.

Articles You Might Like

Share This Article