ಗೋವಾದಲ್ಲಿ ರಫೇಲ್ ಪ್ರಾತ್ಯಕ್ಷಿಕೆ ಆರಂಭ

Social Share

ನವದೆಹಲಿ,ಜ.7- ಭಾರತದ ಆಂತರಿಕ ವಿಮಾನ ವಾಹಕ ನೌಕೆಯನ್ನು ವರ್ಷ ಭಾರತೀಯ ನೌಕಾಪಡೆಗೆ ಸೇರ್ಪಡೆ ಮಾಡಲಿರುವಂತೆಯೇ ಫ್ರಾನ್ಸ್ ಗುರುವಾಗ ಗೋವಾದಲ್ಲಿನ ಕಡಲ ಕಿನಾರೆ ಆಧರಿತ ಪರೀಕ್ಷಾ ಕೇಂದ್ರದಲ್ಲಿ ಭಾರತೀಯ ನೌಕಾಪಡೆಗಾಗಿ ರಫೇಲ್   ಯುದ್ದ ವಿಮಾನದ ಪ್ರಾತ್ಯಕ್ಷಿಕೆ ನಡೆಸಿತು.
ಅಮೆರಿಕವು ಕೂಡ ಬೋಯಿಂಗ್ ಕಂಪನಿ ತಯಾರಿಸಿರುವ ಯುದ್ಧ ವಿಮಾನ ಎಫ್‍ಎ-18ನ್ನು ಎಸ್‍ಬಿಟಿಎಫ್‍ನಲ್ಲಿ ಪ್ರದರ್ಶಿಸಲು ಸಿದ್ದವಾಗಿದೆ. ಎಸ್‍ಬಿಟಿಎಫ್ ಒಂದು ಯುದ್ದ ವಿಮಾನ ವಾಹಕ ನೌಕೆಯನ್ನೇ ಹೋಲುವ ಸ್ಕೈಜಂಪ್‍ನ್ನು ಹೊಂದಿರುತ್ತದೆ. ಎರಡು ಎಂಜಿನ್‍ಗಳ ರರಫೇಲ್ -ಎಂ ಮತ್ತು ಎಫ್/ಎ-18 ಭಾರತಕ್ಕೆ 40,000 ಟನ್ ಐಎಸಿಯಿಂದ ಕಾರ್ಯಾಚರಿಸಲು ಅಗತ್ಯವಿದೆ.  ಇದನ್ನು ಕಳೆದ ಆಗಸ್ಟ್‍ನಲ್ಲಿ ಸೇರ್ಪಡೆಯಾದ ಐಎನ್‍ಎಸ್ ವಿಕ್ರಾಂತ್‍ನಂತೆಯೇ ನೌಕಪಾಡೆಗೆ ಸೇರ್ಪಡೆಗೊಳಿಸಲಾಗುತ್ತದೆ.

Articles You Might Like

Share This Article