ಬೆಂಗಳೂರಲ್ಲಿ ದುಪ್ಪಟಾಯ್ತು ಡೆಂಘೀ ಪೀಡಿತರ ಸಂಖ್ಯೆ

Social Share

ಬೆಂಗಳೂರು,ಅ.31- ಇತ್ತಿಚೆಗೆ ಬಿದ್ದ ಭಾರಿ ಮಳೆ ಹಾಗೂ ಚಳಿಯಿಂದಾಗಿ ನಗರದಲ್ಲಿ ಡೆಂಘೀ ಪೀಡಿತರ ಸಂಖ್ಯೆ ದುಪ್ಪಟಾಗಿದೆ.ರಾಜ್ಯದ ಹಲವಾರು ಭಾಗಗಳಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಾಗಿರುವಂತೆಯೇ ನಗರದಲ್ಲೂ ಡೆಂಘೀ ಪೀಡಿತರ ಸಂಖ್ಯೆ ದ್ವಿಗುಣಗೊಂಡಿದ್ದು, ಈ ತಿಂಗಳಲ್ಲೇ 591 ಮಂದಿಗೆ ಡೆಂಘೀ ಇರುವುದು ಖಚಿತಪಟ್ಟಿದೆ.

ರಾಜ್ಯದಲ್ಲಿ ಡೆಂಘೀ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಈ ವರ್ಷ ಒಂದೂವರೆ ಲಕ್ಷಕ್ಕೂ ಹೆಚ್ಚು ಮಂದಿಯ ತಪಾಸಣೆ ನಡೆಸಿ ಡೆಂಘೀ ಶಂಕೀತರಿಗೆ ಚಿಕಿತ್ಸೆ ನೀಡಿದೆ.

66 ಸಾವಿರಕ್ಕೂ ಅಧಿಕ ಜನರಿಗೆ ರಕ್ತ ಪರೀಕ್ಷೆ ನಡೆಸಲಾಗಿದ್ದು, ಅವರಲ್ಲಿ 7,317 ಮಂದಿಗೆ ಡೆಂಘಿ ಇರುವುದು ದೃಢಪಟ್ಟಿದ್ದು, ಅವರ ಪೈಕಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ.ಅದೇ ರೀತಿ ಕಳೆದ ವರ್ಷ 7189 ಮಂದಿಗೆ ಡೆಂಘೀ ಖಚಿತಪಟ್ಟಿದ್ದು, ಐದು ಮಂದಿ ಮೃತಪಟ್ಟಿದ್ದರು.

ಈ ವರ್ಷ ಯಾವ ಜಿಲ್ಲೆಗಳಲ್ಲಿ ಎಷ್ಟು ಡೆಂಘೀ ಪ್ರಕರಣಗಳು ವರದಿಯಾಗಿವೆ?ಬಿಬಿಎಂಪಿ ವ್ಯಾಪ್ತಿಯಲ್ಲಿ 48,038 ಮಂದಿಯಲ್ಲಿ ಡೆಂಘೀ ಶಂಕೆ ವ್ಯಕ್ತವಾಗಿದ್ದು, ಇವರ ಪೈಕಿ 1,227 ಮಂದಿಗೆ ಡೆಂಘಿ ತಗುಲಿರುವುದು ದೃಢಪಟ್ಟಿದೆ.

23 ಸಾವಿರ ರೂ.ವಿದ್ಯುತ್ ಬಿಲ್ ನೋಡಿ ಬಡ ಕಾರ್ಮಿಕನಿಗೆ ಶಾಕ್ ..!

ಮೈಸೂರು – 660
ಉಡುಪಿ – 477
ಚಿತ್ರದುರ್ಗ – 341
ದಕ್ಷಿಣ ಕನ್ನಡ – 325 ಡೆಂಗಿ ಪ್ರಕರಣಗಳು ದೃಢಪಟ್ಟಿದ್ದರೆ, ಉಳಿದ ಜಿಲ್ಲೆಗಳಲ್ಲಿ ಡೆಂಘೀ ಪೀಡಿತರ ಸಂಖ್ಯೆ 300 ಕ್ಕಿಂತ ಕಡಿಮೆ ಇರುವುದು ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಗುಜರಾತ್‍ನ ಮೊರ್ಬಿ ಸೇತುವೆ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆ

Articles You Might Like

Share This Article