ಬೆಂಗಳೂರು,ಡಿ.12- ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸಿ ವಂಚಿಸುವಂತಹ ಕಂಪನಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೈನ್ ಲಿಂಕ್ ಮೂಲಕ ಅಮಾಯಕರನ್ನು ವಂಚಿಸುವಂತಹ ಸಂಸ್ಥೆಗಳ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು. ಈ ವಂಚನೆಗೊಳಗಾಗುವವರ ದೂರುಗಳ ಪರಿಶೀಲನೆಗೆ ಪ್ರತ್ಯೇಕವಾದ ವಿಭಾಗದ ಅವಶ್ಯಕತೆ ಇದೆ. ತಮಿಳುನಾಡಿನಲ್ಲಿ ಈ ಸಂಬಂಧ ಕಟ್ಟುನಿಟ್ಟಿನ ಕಾಯ್ದೆ ಜಾರಿಗೆ ತಂದಿರುವ ಮಾಹಿತಿ ಇದ್ದು ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಅನುಷ್ಠಾನಗೊಳಿಸುವ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರಕ್ಕೆ ಪತ್ರ:
ಕಬಿನಿ ಜಲಾಶಯ ನಿರ್ಮಾಣ ಮಾಡಿದಾಗ ಜೇನು ಕುರುಬರು ಹಾಗೂ ಬುಡಕಟ್ಟಿನವರು ನೆಲೆಸಿದ್ದ ಜಾಗ ಮತ್ತು ಜಮೀನು ಮುಳುಗಡೆಯಾಗಿತ್ತು. ಅವರಿಗೆ 1969ರಲ್ಲಿ 1070 ಎಕರೆ ಜಮೀನನ್ನು ಅರಣ್ಯ ಇಲಾಖೆಯಿಂದ ಮಂಜೂರ ಮಾಡಿ ಸ್ವಾೀಧಿನ ಪತ್ರ ನೀಡಲಾಗಿತ್ತು.
‘ನೀವು ದೇವರು ಕೊಟ್ಟ ವರ’ ರೊನಾಲ್ಡೊ ಬಣ್ಣಿಸಿದ ಕೊಹ್ಲಿ
1970ರಲ್ಲಿ 700 ಎಕರೆ ಮಾತ್ರ ಕಂದಾಯ ಇಲಾಖೆಗೆ ಹಸ್ತಾಂತರವಾಗಿದ್ದು, ಹಕ್ಕುಪತ್ರವನ್ನು ಜೇನುಕುರುಬರಿಗೆ ನೀಡಿದ್ದರು. ಈ ತನಕ ಅರಣ್ಯ ಇಲಾಖೆ ಜಮೀನು ಪೋಡಿ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ. ಹೀಗಾಗಿ ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಲಾಗಿದೆ.
52 ವರ್ಷಗಳಿಂದ ಇದನ್ನು ಮೀಸಲು ಅರಣ್ಯದಿಂದ ಕೈಬಿಟ್ಟಿಲ್ಲ ಎಂಬ ನೆಪವೊಡ್ಡಿ ಪೋಡಿ ಮಾಡಲು ಅವಕಾಶ ನೀಡಿರಲಿಲ್ಲ. 211 ಕುಟುಂಬಗಳು ಸಾಗುವಳಿ ಮಾಡುತ್ತಿವೆ. ಡಿರಿಸರ್ವ್ ಮಾಡಲು ಕೇಂದ್ರ ಸರ್ಕಾರದ ಒಪ್ಪಿಗೆ ಬೇಕು. ಹೀಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಒಪ್ಪಿದ್ದಾರೆ.
ಅಲ್ಲದೆ 278 ಎಕರೆ ಭೂಮಿಯನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಹಸ್ತಾಂತರಿಸಿಲ್ಲ. ಭೂಮಿ ಹಸ್ತಾಂತರಿಸುವುದು ಹಾಗೂ ಪೋಡಿ ಮಾಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ರೋಲ್‍ಕಾಲ್ ಸರ್ಕಾರದಲ್ಲಿ ಜನರಿಗೆ ರಕ್ಷಣೆ ಇಲ್ಲ: ಕಾಂಗ್ರೆಸ್
700 ಎಕರೆ ಪೋಡಿ ಮಾಡುವಾಗ ಉಪವಿಭಾಗ ಅಧಿಕಾರಿ, ಉಪ ಅರಣ್ಯ ಸಂರಕ್ಷಣಾಕಾರಿ ಹಾಜರಿದ್ದು, ಸಹಿ ಹಾಕುವಂತೆ ತೀರ್ಮಾನಿಸಲಗಿದೆ ಎಂದರು. ಈ ಪೋಡಿಗಾಗಿ ಹೋರಾಟ ನಡೆದಿದ್ದು, ಒಬ್ಬ ವ್ಯಕ್ತಿ ಮೃತರಾಗಿದ್ದಾರೆ. ಕೆಲವರು ಸೆರವಾಸ ಅನುಭವಿಸಿದ್ದಾರೆ. ಒಬ್ಬ ವ್ಯಕ್ತ ಮೃತಪಟ್ಟ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಅವರು ಹೇಳಿದರು.
deposit collecting, cheating, companies, action, Minister Ashok,