ಈ ಮೂಲಕ ಪಂಜಾಬ್‍ನ ಮಾಲ್ವಾ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಡೇರಾಸಚ್ಚಾಸೌಧದ ಭಕ್ತಾಗಳ ಮತ ಸೆಳೆಯಲು ಪ್ರಯತ್ನಗಳು ನಡೆದಿವೆ. ಗುರ್ಮಿತ್ ರಾಮ್ ರಹಿಂ ಅವರು 2002ರಲ್ಲಿ ನಡೆದ ತಮ್ಮ ಮ್ಯಾನೇಜರ್ ಕೊಲೆ ಪ್ರಕರಣ ಹಾಗೂ 20017ರಲ್ಲಿ ಇಬ್ಬರು ಮಹಿಳೆಯರ ಮೇಲೆ ನಡೆದ ಅತ್ಯಾಚಾರದ ಆರೋಪಕ್ಕೆ ಜೀವಾವ ಶಿಕ್ಷೆಗೆ ಗುರಿಯಾಗಿದ್ದಾರೆ. ಪ್ರಸ್ತುತ ಹರ್ಯಾಣದ ರೋಹಟಕ್ ಜಿಲ್ಲೆಯ ಸುನರಿಯಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಅವರಿಗೆ 21 ದಿನಗಳ ಫರ್ಲೋ ಅನುಮತಿ ಸಿಕ್ಕಿದೆ. ಬಹುಶಃ ಇಂದು ಗುರ್ಮಿತ್ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದು ಪಂಜಾಬ್ ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪಂಜಾಬ್‍ನಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ ಹಲವು ರೀತಿಯ ಕಸರತ್ತುಗಳನ್ನು ನಡೆಸಿದೆ. ಹರ್ಯಾಣದಲ್ಲಿ ಬಿಜೆಪಿ ಆಡಳಿತವಿದ್ದು ಗುರ್ಮಿತ್ ಬಿಡುಗಡೆಯ ಬಗ್ಗೆ ಹಲವು ವ್ಯಾಖ್ಯಾನಗಳು ಕೇಳಿ ಬಂದಿವೆ.
ಪಂಜಾಬ್‍ನ ಬತಿಂದಾ, ಮುಕ್ತಸರ್, ಸಂಗ್ರೂರ್, ಮಾನ್ಸಾ, ಪಟಿಯಾಲ, ಬರ್ನಾಲಾ, ಫರಿದಕೋಟ್, ಮೊಗಾ, ಫೆರೋಜೆಪುರ್, ಲೂದಿಯಾನ, ಮೊಹಾಲಿ ಜಿಲ್ಲೆಗಳ ವ್ಯಾಪ್ತಿಯ ಮಾಲ್ವಾ ಪ್ರಾಂತ್ಯದಲ್ಲಿ ಡೆರಾಸೌಧದ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ನಿರ್ಣಾಯಕವಾಗಿದ್ದಾರೆ. ಗುರ್ಮಿತ್ ಶಿಕ್ಷೆಗೆ ಒಳಗಾಗಿ ಜೈಲು ಸೇರಿದಾಗ ಈ ಭಕ್ತರು ಕಳವಳಗೊಂಡಿದ್ದರು.
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಧಾರ್ಮಿಕ ಪಂಥ ಆಧರಿಸಿ ಮತ ಸೆಳೆಯುವ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿದೆ. ಅಲ್ಲಲ್ಲಿ ತಮ್ಮ ಪರಂಪರೆಯ ಸಂತರು ನೀಡುವ ಆಜ್ಞೆಗಳನ್ನು ಆಧರಿಸಿ ಭಕ್ತರು ಅಭ್ಯರ್ಥಿಗಳನ್ನು ಮತ್ತು ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಾರೆ. ಈ ನಿಟ್ಟಿನಲ್ಲಿ ಗುರ್ಮಿತ್‍ರ ಬಿಡುಗಡೆ ಮಹತ್ವ ಪಡೆದುಕೊಂಡಿದೆ. ಪಂಜಾಬ್‍ಗೆ ಈ ಮೊದಲು ಫೆಬ್ರವರಿ 14ರಂದು ಚುನಾವಣೆ ಘೋಷಣೆಯಾಗಿತ್ತು. ಧಾರ್ಮಿಕ ಕಾರಣಕ್ಕಾಗಿಯೇ ಚುನಾವಣೆಯ ದಿನಾಂಕವನ್ನು ಫೆಬ್ರವರಿ 20ಕ್ಕೆ ಬದಲಾವಣೆ ಮಾಡಲಾಗಿದೆ.
