ಹಾಸನ, ಮಾ.9- ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು ಅಡಿಗಲ್ಲಿಟ್ಟ ವಿಮಾನ ನಿಲ್ದಾಣ ಕಾಮಗಾರಿಗೆ ಪುನಃ ಅಡಿಗಲ್ಲಿಡಲು ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆಕ್ಷೇಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಶಕಗಳ ಹಿಂದೆಯೇ ಭುವನಹಳ್ಳಿ ವಿಮಾನ ನಿಲ್ದಾಣ ಕಾಮಗಾರಿಗೆ ದೇವೇಗೌಡರು ಗುದ್ದಲಿ ಪೂಜೆ ನೆರವೇರಿಸಿದ್ದರು. ಇದೀಗ ಅದೇ ಕಾಮಗಾರಿಗೆ ಅಡಿಗಲ್ಲಿಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾ.13ರಂದು ಆಗಮಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜೆಡಿಎಸ್ ಸರ್ಕಾರದ ಅಧಿಕಾರದ ಅವಧಿಯಲ್ಲಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲಿಡಲು ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಅಗತ್ಯವೆನಿಸಿದರೆ ಅಂದು ಪ್ರತಿಭಟನೆ ಮಾಡಲಾಗುವುದು ಎಂದರು.
ನಿಲ್ಲದ ಮೂಲ ವಲಸಿಗರ ಸಂಘರ್ಷ : ಬಿಜೆಪಿಗೆ ಬಿಕ್ಕಟ್ಟು
ವಿಮಾನ ನಿಲ್ದಾಣ ಕಾಮಗಾರಿ ನಡೆಸುವ ನೆಪದಲ್ಲಿ 200ಕ್ಕೂ ಹೆಚ್ಚು ಎಕರೆಯ ಖರಾಬು ಜಾಗವನ್ನು ಲೂಟಿ ಮಾಡಲು ಹೊರಟಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಮೂಲಕ ಉದ್ಘಾಟನೆ ಮಾಡಿಸಲು ಹೊರಟಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ತಿಳಿಸಿರುವುದಾಗಿ ರೇವಣ್ಣ ಹೇಳಿದರು.
ನೂತನ ಆಸ್ಪತ್ರೆ, ತಾಲೂಕು ಕಚೇರಿ ಇನ್ನೂ ನಿರ್ಮಾಣ ಹಂತದಲ್ಲೇ ಇವೆ. ತರಾತುರಿಯಲ್ಲಿ ಮುಖ್ಯಮಂತ್ರಿಗಳು ಉದ್ಘಾಟನೆಗೆ ಆಗಮಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಕಾಮಗಾರಿ ಪ್ರಾರಂಭವಾಗಿ ಹಲವು ತಿಂಗಳು ಕಳೆದಿದ್ದು ಇದೀಗ ಅಡಿಗಲ್ಲು ಇಡಲು ಬರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರು.
ಬಜೆಟ್‍ನಲ್ಲಿ ಘೋಷಣೆ ಮಾಡಿರುವ ಕಾಮಗಾರಿಗಳಿಗೆ ಅಡಿಗಲ್ಲಿಡಲು ಸಿಎಂ ಬರುವುದಕ್ಕೆ ನಮ್ಮ ಅಡ್ಡಿಯಿಲ್ಲ. ನಾವೇ ಅವರನ್ನು ಸ್ವಾಗತಿಸುತ್ತೇವೆ. ಆದರೆ ನಮ್ಮ ಆಡಳಿತದ ಅವಧಿಯಲ್ಲಿ ಅಡಿಗಲ್ಲು ಹಾಕಿರುವ ಕಾಮಗಾರಿಗಳಿಗೆ ಮತ್ತೆ ಅಡಿಗಲ್ಲಿಡಲು ಬರುತ್ತಿರುವುದಕ್ಕೆ ವಿರೋಧವಿದೆ ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ಸಂಘಕ್ಕೆ ಸಹಾಯಧನ ವಿತರಣೆ ಕಾರ್ಯಕ್ರಮ ಹಮ್ಮಿಕೊಂದ್ದಾರೆ. ಈ ಹಣವನ್ನು ಕಳೆದ ವರ್ಷವೇ ನೀಡಬೇಕಾಗಿದ್ದು ಚುನಾವಣೆ ದೃಷ್ಟಿಯಿಂದ ಇದೀಗ ವಿತರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ನಮಗೆ ಗೌರವವಿದೆ. ಮುಖ್ಯಮಂತ್ರಿ ಪದವಿಗೆ ಚ್ಯುತಿ ತರುವಂತಹ ಕೆಲಸಗಳನ್ನು ಅವರು ಮಾಡಬಾರದು ಎಂದರು.
ಪ್ರಭಾವಿಗಳ ಪಾಲಾಗುತ್ತಿದೆ ಬಿಡಿಎಗೆ ಸೇರಿದ 1ಸಾವಿರ ಕೋಟಿ ಬೆಲೆಯ ಅಸ್ತಿ : ಉಮಾಪತಿ ಶ್ರೀನಿವಾಸಗೌಡ
ಹಾಸನದಲ್ಲಿ ಅಕ್ರಮವಾಗಿ 48 ಮದ್ಯದ ಅಂಗಡಿಗೆ ಪರವಾನಗಿ ನೀಡಿರುವ ಬಿಜೆಪಿ ಸರ್ಕಾರ, ಕಳೆದ ನಾಲ್ಕು ವರ್ಷದ ಸಾಧನೆಯಾಗಿದ್ದು, ಈ ಅಂಗಡಿಗಳಿಗೆ ಗಂಧದ ಮರದಲ್ಲಿ ಕೆತ್ತಿಸಿ ಹೊಸ ನಾಮಫಲಕ ಹಾಕಿ ಕಾರ್ಯಕ್ರಮ ಮಾಡಲಿ ನಮ್ಮ ಅಭ್ಯಂತರವಿಲ್ಲ, ಜನರಿಗೆ ಇದೇ ನಮ್ಮ ಜನ ಸಂಕಲ್ಪ ಯಾತ್ರೆ ಎಂದು ಬಿಂಬಿಸಲಿ ಎಂದು ಲೇವಡಿ ಮಾಡಿದರು.
ಅಕ್ರಮವಾಗಿ ಮದ್ಯದ ಅಂಗಡಿಗಳಿಗೆ ಪರವಾನಗೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಮೂಲಕ ಎರಡು, ಮೂರು ಕೋಟಿ ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಜಿಲ್ಲೆಯಲ್ಲಿ ರಾಗಿ ಖರೀದಿ ಸರಿಯಾಗಿ ನಡೆಯುತ್ತಿಲ್ಲ. ರೈತರು ಎರಡು-ಮೂರು ದಿನಗಳಿಂದ ರಾಗಿ ಖರೀದಿ ಕೇಂದ್ರದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿಕೊಂಡು ಬಾಡಿಗೆ ರೂಪದಲ್ಲಿ ಸಾಕಷ್ಟು ಹಣ ವ್ಯಹಿಸುತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಗಮನ ಹರಿಸುತ್ತಿಲ್ಲ. ಜಿಲ್ಲಾವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಬಿದ್ದಿದ್ದು ಮುಚ್ಚುವ ಕಾರ್ಯ ನಡೆದಿಲ್ಲ ಎಂದು ಆರೋಪಿಸಿದರು. ಇವರು ಅಡಿಗಲ್ಲಿಟ್ಟು ಹೋದರೆ ನಮ್ಮ ಸರ್ಕಾರ ಬಂದಾಗ ಅವುಗಳನ್ನು ನೀರಿಗೆ ಬಿಡುತ್ತೇವೆ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಸಾಗರದಾಳದಲ್ಲಿದೆಯಂತೆ 171 ಟ್ರಿಲಿಯನ್ ಪ್ಲಾಸ್ಟಿಕ್ ತ್ಯಾಜ್ಯ..!
ಹೊಳೆನರಸೀಪುರ ಜಾತ್ರಾ ಮಹೋತ್ಸವ ಸಂಬಂಧ ಪ್ರಸಾದ ವಿತರಣೆಯಲ್ಲಿ ರಾಜಕೀಯ ಮಾಡಲಾಗುತ್ತಿದ್ದು, ಕಳೆದ 20 ವರ್ಷದಿಂದ ನಮ್ಮ ಕುಟುಂಬದಿಂದ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರುತ್ತಿರುವ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಚುನಾವಣೆಯ ಸಂದರ್ಭದಲ್ಲಿ ಅಡ್ಡಿಪಡಿಸುತ್ತಿದ್ದಾರೆ. ತಾಲೂಕು ಆಡಳಿತ ಎಲ್ಲವನ್ನು ನಿಯಮ ಬದ್ಧವಾಗಿಯೇ ಮಾಡುತ್ತಿದೆ ಎಂದು ರೇವಣ್ಣ ಸಮರ್ಥಿಸಿಕೊಂಡರು.
Deve Gowda, Hassan, Airport, Revanna, CM Bommai,