ಪ್ರಧಾನಿಯಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದ ದೇವೇಗೌಡರು

Social Share

ಬೆಂಗಳೂರು,ಡಿ.31- ಪ್ರಧಾನಿಯಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡ ಪ್ರಧಾನಮಂತ್ರಿಗಳ ಪೈಕಿ ನರೇಂದ್ರ ಮೋದಿ ಎರಡನೆಯವರಾಗಿದ್ದು, ಎಚ್.ಡಿ.ದೇವೇಗೌಡ ಮೊದಲನೆಯವರಾಗಿದ್ದಾರೆ.

ಕರ್ನಾಟಕದವರೇ ಆದ ಎಚ್.ಡಿ.ದೇವೇಗೌಡ 1996ರ ಜೂನ್ 1ರಿಂದ 1997 ಏಪ್ರಿಲ್ 21ರ ನಡುವೆ ದೇಶದ ಪ್ರಧಾನಿಯಾಗಿದ್ದರು. 1996ರ ಆಗಸ್ಟ್ 5ರಂದು ಪ್ರಧಾನಿಯಾಗಿ ಕಾಶ್ಮೀರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆ ವೇಳೆ ಅವರ ತಾಯಿ ದೇವಮ್ಮ ನಿಧನರಾಗಿದ್ದರು. ಸುದ್ದಿ ತಿಳಿದು ದುಖಃತಪ್ತ ದೇವೇಗೌಡರು ಕಾಶ್ಮೀರದಿಂದ ಅದೇ ದಿನ ಮಧ್ಯಾಹ್ನದ ವೇಳೆಗೆ ಹಾಸನಕ್ಕೆ ತಲುಪಿದರು ಮತ್ತು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ನರೇಂದ್ರ ಮೋದಿ ಅವರಂತೆ ದೇವೇಗೌಡರು ಅಲ್ಪಕಾಲದಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ಅಧಿಕಾರದಲ್ಲಿದ್ದಾಗಲೇ ಪೆಪೋಷಕರನ್ನು ಕಳೆದುಕೊಂಡ ಮೊದಲ ಪ್ರಧಾನಿ ದೇವೇಗೌಡರಾಗಿದ್ದಾರೆ.

ಮಾಜಿ ಶಾಸಕ ಸುರೇಶ್‍ಗೌಡ ಅವರ ಧಮಕಿ ವಿಡಿಯೋ ವೈರಲ್

ನರೇಂದ್ರ ಮೋದಿ ಅವರ ತಾಯಿ ನಿನ್ನೆ ಮುಂಜಾನೆ 3.30ರಲ್ಲಿ ಇಹಲೋಕ ತ್ಯಜಿಸಿದ್ದರು. ಬೆಳಗ್ಗೆ 9 ಗಂಟೆ ವೇಳೆಗೆ ಅಂತ್ಯಕ್ರಿಯೆ ನಡೆಯಿತು. ಅದೇ ರೀತಿ ದೇವೇಗೌಡರ ತಾಯಿ ಅಂತ್ಯಕ್ರಿಯೆಯೂ ಕೂಡ ಸಂಪ್ರದಾಯ ಬದ್ಧವಾಗಿ, ಸಾಮಾನ್ಯ ರೀತಿಯಲ್ಲಿ ನಡೆದಿತ್ತು.

ರಾಜಾಜಿನಗರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಮಾರಾಮಾರಿ

ಉನ್ನತ ಸ್ಥಾನದಲ್ಲಿದ್ದರೂ ತಾಯಿಯೊಂದಿಗಿನ ನಂಟನ್ನು ದೇವೇಗೌಡರು ಅಪ್ಯಾಯಮಾನ ಕಾಯ್ದುಕೊಂಡಿದ್ದರು. ಇನ್ನೂ ನರೇಂದ್ರ ಮೋದಿ ಅವರ ತಾಯಿ ಹಿರಾಬೇನ್ ನಡುವಿನ ಬಾಂಧವ್ಯ ಜಗತ್ತಿಗೆ ಮಾದರಿಯಾಗಿತ್ತು.

#DeveGowda, #Mother, #PrimeMinister, #NarendraModi,

Articles You Might Like

Share This Article