‘ಹಿಂದೂ’ ನಂತರ ‘ಸಾಂಭಾಜಿ’ ವಿವಾದಲ್ಲಿ ಸತೀಶ್ ಜಾರಕಿಹೊಳಿ

Social Share

ಮುಂಬೈ,ನ.11- ಛತ್ರಪತಿ ಸಾಂಭಾಜಿ ಮಹಾರಾಜ್ ಕುರಿತಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಆಕ್ಷೇಪಾರ್ಹ ಹೇಳಿಕೆಗೆ ರಾಹುಲ್‍ಗಾಂಧಿ ಅವರ ಸಮ್ಮತಿ ಇದೆಯೇ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಶ್ನಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಳೆದ ಭಾನುವಾರ ಮಾತನಾಡಿದ ಸತೀಶ್ ಜಾರಕಿಹೊಳಿ ಅವರ ಹೇಳಿಕೆಗಳು ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.

ಇದೇ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಕುರಿತು ಸತೀಶ್ ಜಾರಕಿಹೊಳಿ ಅವರು ನೀಡಿದ ಹೇಳಿಕೆ ರಾಜ್ಯದಲ್ಲೇ ಅಷ್ಟೇ ಅಲ್ಲ ರಾಷ್ಟ್ರ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿ ಟೀಕೆಗೆ ಗುರಿಯಾಗಿದೆ. ಪಕ್ಷದ ಒತ್ತಡಕ್ಕೆ ಮಣಿದ ಜಾರಕಿಹೊಳಿ ತಮ್ಮ ಆ ಹೇಳಿಕೆಯನ್ನು ಹಿಂಪಡೆದಿದ್ದಾರೆ.

ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರನ ಎನ್‌ಕೌಂಟರ್‌

ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮತ್ತೊಂದು ವೀಡಿಯೋ ವೈರಲ್ ಆಗಿದೆ. ಅದರಲ್ಲಿ ಸತೀಶ್ ಜಾರಕಿಹೊಳಿ, ಭಾರತದ ಇತಿಹಾಸದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಂಭಾಜಿ ಮಹಾರಾಜ್‍ರನ್ನು ಬ್ರಿಟಿಷರು ಹತ್ಯೆ ಮಾಡಿದರು. ಶಿವಾಜಿ ಮಹಾರಾಜರಿಗೆ ವಿಷಯ ಹಾಕಿದ್ದಕ್ಕಾಗಿ ಬ್ರಿಟಿಷರು ಸಾಂಭಾಜಿ ಅವರನ್ನು ಬಂಧಿಸಿದ್ದರು. ಆದರೂ ಇತಿಹಾಸದಲ್ಲಿ ಸಾಂಭಾಜೀಯವರನ್ನು ಧರ್ಮವೀರ ಎಂದು ಸಂಬೋಸಲಾಗಿದೆ ಎಂದು ಆಕ್ಷೇಪಾರ್ಹ ಮಾತನಾಡಿದ್ದಾರೆ.

ಚೆನ್ನೈ- ಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಮೋದಿ ಚಾಲನೆ

ಈ ವಿಡಿಯೋವನ್ನು ಟ್ವೀಟ್ ಮಾಡಿರುವ ದೇವೇಂದ್ರ ಫಡ್ನವೀಸ್, ಆ ಸೂಕ್ಷ್ಮ ತಪ್ಪು ಮಾಹಿತಿ, ಅವಮಾನಕಾರಿ ಸುಳ್ಳು ಹೇಳಿಕೆ ಕುರಿತಂತೆ ರಾಹುಲ್‍ಗಾಂಯವರ ಅಭಿಪ್ರಾಯವೇನು? ಸತೀಶ್ ಜಾರಕಿಹೊಳಿ ಅವರ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಹೇಳಿಕೆಗಳೇ ಎಂದು ಪ್ರಶ್ನಿಸಿದ್ದಾರೆ.

ಛತ್ರಪತಿ ಶಾಂಭಾಜಿ ಮಹಾರಾಜ್ ಅವರಿಗೆ ಅವಾಮಾನವಾಗುವುದನ್ನು ಸಹಿಸುವುದಿಲ್ಲ ಎಂದು ಫಡ್ನವೀಸ್ ತಿರುಗೇಟು ನೀಡಿದ್ದಾರೆ.

Articles You Might Like

Share This Article